ವಿದೇಶಿ ಬಂಡವಾಳಿಗರ
ಸೆಳೆಯಲು ಹೆಣೋರ್ವಳ
ಹೂನಗೆ ಹೊತ್ತ
ಸಂಸ್ಕೃತಿಯ ಮುಸುಕಿನಲಿ
ಮುಗುಳ್ನಗೆಯ ಸ್ವಾಗತ,
ವಿದೇಶಿ ಬಂಡವಾಳಕ್ಕೆ
ಇದೇ ಸುವರ್ಣಾವಕಾಶ.
ಬನ್ನಿ ಏಡ್ಸ್ನ ಭಯವಿಲ್ಲ
ಬಹಳ ಉದಾರಿಗಳು ನಾವು
ಮುಕ್ತ ಮಾರುಕಟ್ಟೆಯಲ್ಲಿ
ಪರಕೀಯರಿಗೆ ಮಾರಿಕೊಂಡ
ಕೇವಲ ಶೃಂಗಾರ ಸಾಧನಗಳು
ನಿಷ್ಕಪಟ ಮುಗ್ಧ ಹಸುಳೆಗಳು
ಮುಖವಿಲ್ಲದವರಿಗೆ ಉಣಬಡಿಸಲು
ಕಂದಮ್ಮಗಳ ಕನಸುಗಳನು
ನಿರ್ದಯವಾಗಿ ಹೊಸಕಿ
ಅಂಧಕಾರದ ಕೂಪಕ್ಕೆ
ಕರುಣೆಯಿಲ್ಲದೆ ನೂಕುವ-
ಅಂಗಾಂಗ ಕಸಿ ಮಾಡಿ
ಬಿಡಿಯಾಗಿ ಬೇಕಿದ್ದರೆ
ಇಡಿಯಾಗಿ ಕೊಡುತ್ತೇವೆ.
ಮಾನ ಅಡವಿಟ್ಟಾದರೂ
ಪ್ರನಾಳಕ್ಕೆ ಬಸಿರ ಹೊರಿಸಿ,
ಅತಂತ್ರ ಸಂಕೋಲೆಗಳಲ್ಲಿ
ಭ್ರೂಣಗಳ ಸಿಲುಕಿಸುತ್ತೇವೆ.
ಅಳಿದುಳಿದ ಕನಸುಗಳು
ಶಿಲುಬೆಗೇರಿಸುತ್ತಾ
ಹೊಸ ತಂತ್ರ ಮಂತ್ರಗಳು
ತಲೆಹಿಡುಕರ ಜಾಲಗಳು
ತಲೆಯೆತ್ತಿ ನಿಂತಿರುವ
ಹೊಸ ಅರ್ಥ ನೀತಿಗಳು,
ಉಳ್ಳವರ ತೆವಲುಗಳು,
ಕೊರಳಿಗೆ ಬಿದ್ದ ಉರುಳುಗಳು,
ಸಡಿಲಿಸಲು ಸಂಕೋಲೆ
ಹರಕೆಯ ಕುರಿಗಳು,
ಕೊಡವಿ ಎದ್ದರೆ ಪ್ರಜ್ಞೆ
ಇನ್ನೆಲ್ಲಿಯ ಬಲಿಗಳು ?
*****
Related Post
ಸಣ್ಣ ಕತೆ
-
ಎದಗೆ ಬಿದ್ದ ಕತೆ
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…