ಕತ್ತಲಲ್ಲಿ ವಾಹನಗಳ ಬರುವಿಕೆಯನ್ನು ಅವುಗಳ ಹೆಡ್ ಲೈಟ್‌ಗಳಿಂದ ಪತ್ತೆ ಹಚ್ಚಬಹುದು. ದಾರಿಯಲ್ಲಿಯ ಕೈಮರ, ಸೂಚನಾ ಫಲಕಗಳಿಗೆ ಬೆಳಕು ಬಿದ್ದಾಗ ಅದರಲ್ಲಿಯ ರಂಜಕದ ಅಂಶದಿಂದ ಅಲ್ಲಿಯ ಅಕ್ಷರಗಳು ಹೊಳೆಯುತ್ತವೆ. ರಾತ್ರಿಯಲ್ಲಿ ಬೆಕ್ಕೂ, ಹುಲಿಗಳು ತಿರುಗಾಡಿದರೂ ಅವುಗಳ ಕಣ್ಣುಗಳು ಸಹ ಹೊಳೆಯುತ್ತವೆ. ಆದರೆ ಮನುಷ್ಯರು ಧರಿಸಿದ ಬಟ್ಟೆಗಳು ರಾತ್ರಿಯಲ್ಲಿ ಹೊಳೆಯುತ್ತವೆ, ಎಂದರೆ ಸೋಜಿಗ ಅಲ್ಲವೆ? ಇಂಥಹ ಶರ್ಟ್‌ಗಳನ್ನು ಜಪಾನ್ ದೇಶ ಕಂಡುಹಿಡಿದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕತ್ತಲಾದಂತೆಲ್ಲ ತಮ್ಮ ಕಾಂತಿಯಿಂದ ಎದುರಿಗೆ ಬರುವವರಿಗೆ ಒಬ್ಬ ವ್ಯಕ್ತಿ ಬರುತ್ತಿದ್ದಾನೆ ದಾರಿಬಿಡಬೇಕೆಂದು ತಿಳಿಯುತ್ತದೆ. ಇಂಥಹಬಟ್ಟೆಗಳನ್ನು ದೇಹದ ಮೇಲೆ ಸುಲಭವಾಗಿ ಧರಿಸಬಹುದು. ಇದು ಬೆಳಕಿನಲ್ಲಿ ಸಾಧಾರಣವಿರುತ್ತದೆ, ಆದರೆ ರಾತ್ರಿಯಾಯಿತೆಂದರೆ ಹೊಳೆಯಲಾರಂಭಿಸುತ್ತದೆ. ಈ ಬಟ್ಟೆಯಲ್ಲಿ ಮನೆಯಲ್ಲಿಯ ಪ್ರಮುಖ ವಸ್ತುಗಳನ್ನು ಸುತ್ತಿಟ್ಟರೆ ಅದು ಹೊಳೆದು ಅದರ ಸ್ಥಳವಮ್ನ ಗುರುತಿಸುತ್ತದೆ.
*****
Related Post
ಸಣ್ಣ ಕತೆ
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ದೇವರೇ ಪಾರುಮಾಡಿದಿ ಕಂಡಿಯಾ
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…