ಗಗನದಂಗಳ ಹಾರು ಹಕ್ಕಿಯೆ
ಯಾವ ಜಾತಿಯು ನಿನ್ನದು
ಶಾಂತ ಶೀತಲ ಮಧುರ ಗಾಳಿಯೆ
ಯಾವ ದೇಶಾ ನಿನ್ನದು
ಮನುಜ ಮನುಜನ ಜಡಿದು ಒಡೆದನು
ಮನುಜ ದನುಜಾ ಅದನೆ
ಆತ್ಮ ಧರ್ಮಾ ವಿಶ್ವ ಧರ್ಮಾ
ಮರೆತು ಮಣ್ಣನು ತಿಂದನೆ
ನನ್ನ ದೇವರು ಅವನ ದೇವರು
ಇವನ ದೇವರು ಭಿನ್ನವೇ
ಪ್ರೇಮವೊಂದೆ ಪರಮ ಧರ್ಮವು
ನೂರು ಧರ್ಮಾ ಮಾನ್ಯವೆ
ಹಲವು ಶಾಸ್ತ್ರದ ಕೋಟೆ ಏತಕೆ
ಕೊಡುವ ದೇವನು ಕೇಳ್ವನೆ
ಜಗದ ಮಕ್ಕಳ ಯುಗದ ಮಕ್ಕಳ
ಕಾಯ್ದ ದೇವನು ಕೊಲುವನೆ
*****