ಆಸೆಯು ಮುಂದೆ ನಿರಾಸೆಯು ಹಿಂದೆ|
ಆಮಿಷದಿಂದೆ ಬೇಸರ ಮುಂದೆ|
ತಿಳಿದೂ ಅದರ ಹಿಂದೆ ಹೋದರೆ
ನಾವೂ ಕುರಿ ಮಂದೆ||
ಬೆಳಕ ಜೊತೆಯಲಿ ನೆರಳಿರುವಂತೆ
ದೀಪದ ಕೆಳಗಡೆ ಕತ್ತಲಿರುವಂತೆ
ಆಸೆಯು ತುಂಬಾ ಚಿಕ್ಕದಿರಬೇಕು|
ನಾಳೆಯ ಕಾಣಲಷ್ಟೇ ಆಸೆಯು ಬೇಕು
ದುರಾಸೆಯ ಬುದ್ಧಿಯ ಕೈ ಬಿಡಬೇಕು|
ಅಸೂಯ್ಯೆ ಅಸಹನೆ ಅಸಹಕಾರ
ಮನುಜನ ಅವಸಾನಕೆ ಕಾರಣ||
ಆಸೆಯೇ ದುಃಖದ ಮೂಲವೆಂದರು
ಜೀವನವನರಿತ ಶಿವ ಶರಣವರೇಣ್ಯರು|
ಆಮಿಷ ಮನುಜನ ಮೋಸದ ಜಾಲ|
ಬಲಿಯಾಗುವ ಮುನ್ನವೇ
ತಿಳಿಯಿರಿ ನೀವದರ ಮೂಲ|
ಅತೀ ಆಸೆಯ ಪಡದೆ ನಿರಾಸೆಹೊಂದದೆ
ಇತಿಮಿತಿಯಲಿ ಜೀವಿಸುವುದೇ ಸುಖದ ಮೂಲ||
*****