ಅನಾಥ ಬಂಧು

ಅನಾಥ ಬಂಧು
ನೀನಾಗಿರಲು|
ತಬ್ಬಲಿ‌ಎಂದೇಕೆ
ಅಂದುಕೊಳ್ಳಲಿ ನಾನು||

ನಿನ್ನೀ ಜಗದಲಿ, ನನ್ನ
ಹಿಡಿ ಅನ್ನಕೆ ಕೊರತೆಯೇ|
ಒಂದು ಘಳಿಗೆಯ ಪುಟ್ಟನಿದ್ದೆಗೆ
ನಿನ್ನೀ ವಿಶಾಲ ಜಗದಲಿ
ವಿಶ್ರಾಂತ ಜಾಗಕೆ ಬರವೆ|
ನನ್ನ ಸ್ನೇಹ ಸಂಘಕೆ
ನಿನ್ನ ಭಕ್ತ ವೃಂದವಿರುವಾಗ
ನಾನು ಹೇಗೆ ಅನಾಥನು?||

ವಾರ ದಿನ ನಕ್ಷತ್ರ ತಿಥಿಗಳು
ನನ್ನ ಕಾಯುತ್ತಿರುವಾಗ|
ಸ್ನಾನ ಸಂಧ್ಯಾದಿಗಳಿಗೆ
ಕೆರೆಕಟ್ಟೆಗಳಿರುವಾಗ|
ಇರುಳಲಿ ತಾರೆಗಳು
ನನ್ನ ಬೆಳಗುತಿರುವಾಗ
ದಿನವಿಡೀ ನನ್ನ ಸ್ಮೃತಿಪಟಲದಲ್ಲಿ
ನಿನ್ನ ಸ್ಮರಿಸುತ್ತಿರುವಾಗ
ನಾ ಹೇಗೆ ಅನಾಥನು?|
ನನ್ನಂಥವರಿಗೆಲ್ಲ ನೀನೇ ನಾಥನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಹೋದರೊ ಜನರು?
Next post ಭಲಭಲರೆ, ಶಕುನಿ!

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…