ಸೇವೆ ಮಾಡುವರು ಬೇಕಾಗಿದೆ

ಸೇವೆ ಮಾಡುವರು ಬೇಕಾಗಿದೆ
ಕನ್ನಡದ ಸೇವೆ ಮಾಡುವವರು
ಬೇಕಾಗಿದೆ||
ಸೇನೆ ಕಟ್ಟುವವರು ಬೇಕಾಗಿದೆ
ಕನ್ನಡ ಸೇನೆ ಕಟ್ಟುವವರು ಬೇಕಾಗಿದೆ||

ಗಡಿಯ ಒಳಗೆ, ಗಡಿಯ ಹೊರಗೆ
ಕನ್ನಡದ ಪಡೆಯ ಕಟ್ಟುವವರು
ಹುಟ್ಟಬೇಕಾಗಿದೆ|
ಗಲ್ಲಿ ಗಲ್ಲಿಯಲ್ಲಿ ಕನ್ನಡದ ಬಾವುಟ
ಹಾರಿಸುವವರು ಬೇಕಾಗಿದೆ||

ಗಡಿಯಲ್ಲಿನ ಕನ್ನಡಿಗರ ಮನಸ ತಿಳಿದು
ಅವರ ನೋವ ಹೋಗಲಾಡಿಸುವವರು
ಬೇಕಾಗಿದೆ|
ಕನ್ನಡದ ಸಂಘಟನೆಗಳ ಒಟ್ಟುಗೂಡಿಸಿ
ಕನ್ನಡಿಗರ ಬಲವರ್‍ಧನೆ ಮಾಡುವವರು
ಬೇಕಾಗಿದೆ||

ಕನ್ನಡ ನೆಲ ಜಲ ಭಾಷೆಯ ಸಂರಕ್ಷಣೆಯ
ಮಾಡುವವರು ಮುಂದೆ ಬರಬೇಕಾಗಿದೆ|
ಕನ್ನಡಜನರ ಸ್ವಾಭಿಮಾನಕಪಚಾರ
ಮಾಡುವವರ ವಿಚಾರಿಸುವ ಅಪ್ಪಟ
ಕನ್ನಡಿಗರು ಹೆಚ್ಚಬೇಕಾಗಿದೆ|
ಕನ್ನಡಿಗರ ಅಭಿಮಾನವ ಕೆರಳಿಸುವರ
ಹುಟ್ಟಡಗಿಸುವವರು ಬೇಕಾಗಿದೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಜಾಬು-ಕಾಶ್ಮೀರ
Next post ಮಾಟಗಾರ್‍ತಿ

ಸಣ್ಣ ಕತೆ

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…