ಅಮ್ಮ ನಿನ್ನ ಮಗನಮ್ಮಾ
ಏನು ತುಂಟನಿವನಮ್ಮ|
ನೀನೇ ಬುದ್ಧಿ ಕಲಿಸಮ್ಮ
ಯಾರ ಮಾತ ಕೇಳನಮ್ಮ
ನಿನ್ನ ಹೊರತು ಇನ್ನಾರಿಗೂ
ಸ್ವಲ್ಪವೂ ಹೆದರನಮ್ಮ||
ಆಟದಲ್ಲಿ ಅವನೇ ಎಂದೂ
ಗೆಲ್ಲಲೇಬೇಕಂತಲ್ಲಮ್ಮ!
ಸೋತವರು ಅವನೇಳಿದಂತೆಯೇ
ಕೇಳಬೇಕಂತಮ್ಮಮ್ಮ|
ಮಾತಿನಲ್ಲೇ ಮನೆಯ ಕಟ್ಟುವನಮ್ಮ
ನೋಟದಲ್ಲೇ ಎಲ್ಲರ ಸೋಲಿಸುವನಿವನಮ್ಮ||
ಬೆಣ್ಣೆ ಕದ್ದರೆ ಇವನ
ಹೊಡೆಯ ಬಾರದಂತಮ್ಮ|
ಹಾಲು ಗಡಿಗೆ ಕೆಡವಿದರೆ
ಇವನ ಬೈಯ್ಯಬಾರದಂತಮ್ಮ|
ನಮ್ಮಯ ಬಟ್ಟೆ ಒಯ್ಯದರಿವನ
ನಿನಗೆ ದೂರಬಾರದಂತಮ್ಮ|
ಕೊಳಲನೂದಿ ನಮೆಲ್ಲರಾ
ಮನವ ಕದ್ದಿಯನಿವನಮ್ಮ||
ಕೋಲಾಟಕೆ ಕರೆದು ನಮ್ಮನ
ಸುತ್ತಿಸಿ ಸೋಲಿಸಿ ಬೀಳಿಸುವನಮ್ಮ|
ಈ ಕೃಷ್ಣ ಎನೇ ಮಾಡಿದರೂ
ಬಲು ಇಷ್ಟ ನಮೆಲ್ಲರಿಗಮ್ಮ||
ಒಮ್ಮೊಮ್ಮೆ ಬೇಡ ಇವನ ಸಹವಾಸವೆಂದರೂ
ಮನುಸು ಕರಗಿ ಇವನೇ ಬೇಕು ಎನಿಸುವುದಮ್ಮ||
*****