ಸೂರ್ಯನ ಧಗೆಯ ಪ್ರತಿಫಲ
ಆಗುವುದು ಆವಿ ಧರೆಯ ಜಲ
ಸೇರುವುದು ನೋಡಾ ವಾಯು ಮಂಡಲ
ಆವಿ ಏರೇರಿ ಮೇಲೇರಿ ಒಡಲ
ಕರಿ ಮೋಡ ಸಾಂದ್ರೀಕರಿಸಿ
ತಂಪಾದ ಮೋಡಗಳೆಲ್ಲಾ ಮೇಲೈಸಿ
ಮಿಂಚು ಕೋಲ್ಕಿಂಚು ಸಿಡಿಲುಗಳಾರ್‍ಭಟಿಸಿ
ಭರದಿ ಇಳೆಗೆ ಮಳೆ ಸುರಿಸಿ
ಧರೆಯ ಒಡಲೆಲ್ಲಾ ನೀರೇ ನೀರು
ಮುಸುಕಿತಲ್ಲೆಲ್ಲೂ ಹಸಿರೇ ಹಸಿರು
ಬಂತು ಭುವಿಗೆ ಜೀವ ಕಳೆ
ನಕ್ಕಿತು ಕಿಲ ಕಿಲನೆ ಜಗವೆಲ್ಲಾ
ತಪ್ಪಿದರೆಚ್ಚರ ಬಂತೇ ಗಂಡಾಂತರ
ಊಹಿಸಲಸದಳ ಈ ಬದುಕು
ಸಾವು ದಿಟ ನೀರಿಲ್ಲದಾ ದೇಹಕೆ
ಎಷ್ಟೊಂದು ಪಾವನ ಈ ಜಲ
ಮಾಡಿದರೆ ಹೆಚ್ಚು ದುರ್ಬಳಕೆ
ಬರಿದಾಗುವುದು ಈ ಭಂಡಾರ
ಕಲುಷಿತಗೊಂಡ ನೀರು
ಮಾರಕ ಜೀವ ಸಂಕುಲಕೆ
ಅಂತರ್‍ಜಲ ಸಂರಕ್ಷಿಸಿ
ಮರ ಗಿಡ ಬಳ್ಳಿ ಹೆಚ್ಚೆಚ್ಚು ಬೆಳೆಸಿ
ತೋಡಿ ಇಂಗುಗುಂಡಿ ಮಾಡಿ ಮಳೆ ಕೊಯ್ಲು
ಇದುವೇ ಪ್ರಾಣಾಮ್ಲ ಜಗಕೆಲ್ಲ
*****