ಯಾತ್ರಿಕರು ಓಯಸಿಸ್ಸೆಂದು
ಭ್ರಮಿಸುವರು ಮರು ಭೂಮಿಯಲಿ
ಬಾಯಾರಿಕೆಯ ತೃಷೆ ನೀಗಿಸಲು
ಹೋಗುವರು ನೀರೆಂದು ಭಾವಿಸಿ
ಸಮೀಪಿಸಿದಂತೆ
ಕಂಡ ನೀರು ಮಾಯ
ಈ ಸೋಜಿಗಕೆ ಬೀಳುವರು ಬೇಸ್ತು
ಮಾಯವಾದ ನೀರು
ಕಾಣುವುದು ಮುಂದೆಲ್ಲೋ ದೂರದಲಿ
ಪುನಃ ಸಾಗಿದರೆ ಗಾಳಿ ಪದರಲಿ
ಉಂಟಾದ ಪ್ರತಿಬಿಂಬ ಕಂಡಿತಲ್ಲಿ
ನೀರಿನ ಪದರಲಿ ಉಂಟಾದ
ಪ್ರತಿಬಿಂಬವೆಂದು ಊಹಿಸಿ
ನಿಜವನರಿಯದೇ ಮೋಸ ಹೋದರಲ್ಲಿ
ಸಮತಟ್ಟು ಮಾಡಿದ ಹೆದ್ದಾರಿಯಲಿ
ಸಂಭವಿಸುವುದುಂಟು ಈ ವಿದ್ಯಮಾನ
ಇದಕೆ ‘ಬಿಸಿಲ್ಗುದರೆ’ ‘ಮೃಗಜಲ’
ಎಂಬ ಸುಂದರ ಹೆಸರುಗಳುಂಟು
ಗಾಳಿ ಬೆಳಕಿನ ಚೆಲ್ಲಾಟ
ಬಿಸಿಲ ದಗೆಯಲಿ
ಕುತೂಹಲಕಾರಿ ಜನನ
ಈ ವಿಚಿತ್ರ ಬೆರಗಿಗೆ ಬೆಳಕಿನ
ಸಂಪೂರ್ಣ ಆಂತರಿಕ ಪ್ರತಿಫಲನ ಕಾರಣವು
ಇದುವೇ ಬೆಳಕಿನ ಆಟ ನಿಸರ್ಗದಲಿ
ಏನೆಲ್ಲಾ ಅಚ್ಚರಿಗಳುಂಟು
ಸೋಲಾರೆಂಬ ಕಣಜದಲಿ
*****