(Micro wave oven)
ವಿದ್ಯುತ್ ಶಕ್ತಿ, ಅನಿಲ, ಇಜ್ಜಲ, ಸೌದೆ, ಹೊಟ್ಟು, ಕಟ್ಟಿಗೆ, ಇದ್ಯಾವ ವಸ್ತು ಇಲ್ಲದೆಯೂ ಅತ್ಯಂತ ಬೇಗನೆ ಯಾವುದೇ ಪದಾರ್ಥಗಳನ್ನು ಬೇಯಿಸಬಲ್ಲ ಒಲೆಯೇ ಸೂಕ್ಷ್ಮತರಂಗಗಳ ಒಲೆ. ಇದನ್ನು ಮ್ಯಾಗ್ನೆ ಟ್ರಾನ್ಸ್ ಎಂಬ ಒಂದು ಕಂಪನಿಯಲ್ಲಿಯ ಸಂಶೋಧಕರು ೧೯೬೦ ರಲ್ಲಿಯೇ ಅಮೆರಿಕಾದಲ್ಲಿ ಕಂಡು ಹಿಡಿದಿದ್ದರೂ ಬೆಳಕಿಗೆ ಬಂದಿರಲಿಲ್ಲ. ಇದೀಗ ಎಲ್ಲೆಡೆಯಲ್ಲಿಯೂ ಪ್ರಚಾರ ಪಡೆಯುತ್ತಿರುವ ಈ ಸೂಕ್ಷ್ಮ ತರಂಗಗಳ ಒಲೆಯು ಬೇಡಿಕೆಯಲ್ಲಿದೆ. ಈ ಒಲೆ ಹೆಚ್ಚು ಕಂಪನ ವೇಗದ ರೇಡಿಯೋ ತರಂಗಗಳನ್ನೇ ಬಳಸಲ್ಪಡುತ್ತದೆ. ತರಂಗಗಳು ಬೇಯಿಸುವ ಆಹಾರವನ್ನು ಒಳಹೊಕ್ಕು ಅದರಲ್ಲಿರುವ ಪದಾರ್ಥಗಳನ್ನು ಮಥನ ಮಾಡಿ ಆಹಾರಪಚನವನ್ನುಂಟು ಮಾಡುತ್ತದೆ. ಇದರಿಂದ ಆಹಾರವು ಹೊರವಲಯದಲ್ಲಿ ಮಾತ್ರ ಪಚನವಾಗದೇ ಅಂತರೀಕರವಾಗಿಯೂ ಬೇಯಿಸಲ್ಪಡುತ್ತದೆ. ಈ ಮಥನ ಕ್ರಿಯೆಯಲ್ಲಿ ಶಾಖವು ವಿಪರೀತ ಏರುತ್ತದೆ. ಈ ಬಲೆಯಲ್ಲಿ ಉತ್ಪತ್ತಿಂಟಾಗುವ ಸೂಕ್ಷ್ಮತರಂಗಗಳ ಆಧಾರವೇ ಡ್ಯೂಗ್ನೆಟ್ರಾನ್ಸ್ ಇದು ಹೆಚ್ಚು ಕಂಪನವೇಗವ Diode ಇದರಲ್ಲಿ ಉರುಳೆಯಕಾರದ ಋಣ ವಿದ್ಯುತ್ವಾಹಕವಿದೆ ಮತ್ತು (Cathode) ಮತ್ತು ಏಕಾಕ್ಷೀಯ ಧನವಿದ್ಯುದ್ವಾಹಕವೂ (Anode) ಇದೆ. ಈ ಎರಡೂ ವಿದ್ಯುತ್ವಾಹಕಗಳ ಮೂಲಕ ನೇರವಾಗಿ ವಿದ್ಯುತ್‌ಶಕ್ತಿಯನ್ನು ಹಾಯಿಸಿದರೆ ಅಲ್ಲಿ ವಿದ್ಯುತ್ ಕ್ಷೇತ್ರವು ನಿರ್ಮಿತವಾಗುತ್ತದೆ. ಆಯಸ್ಕಾಂತ ಕ್ಷೇತ್ರವನ್ನು ಅಡ್ಡಡ್ಡಲಾಗಿ ಹೊರಗಡೆಯ ಆಯಸ್ಕಾಂತದ ಸಹಾಯದಿಂದ ಪ್ರಯೋಗಿಸಿದರೆ ಮತ್ತು ಇದನ್ನು ಅನುಕಣನೀಯ ಸಾಧನಕ್ಕೆ ಸಿಕ್ಕಿಸಿದರೆ ಇದು Oscillator ರೀತಿಯಲ್ಲಿ ವರ್ತಿಸಿ ಅತ್ಯಂತ ಹೆಚ್ಚಿನ ಕಂಪನ ವೇಗದ ತರಂಗಗಳನು ಉತ್ಪತ್ತಿ ಮಾಡಬಲ್ಲದು.
*****