ಮೂಗು ಮನುಷ್ಯನ ಪಂಚೇಂದ್ರಿಯಗಳಲ್ಲಿ ಒಂದು ಪ್ರಮುಖವಾದ ಅಂಗ. ಈ ಮೂಗು ಮೂಸುವ ಶಕ್ತಿಯಿಂದ ಹೆಸರಾಗಿದೆ. ಮೂಗಿನಿಂದಲೇ ಸುವಾಸನೆಯ ಪ್ರಭಾವವನ್ನು ಕಂಡು ಹಿಡಿಯಬಹುಡು. ಕೆಲರೋಗಗಳನ್ನು ಮೂಗಿನಿಂದ ಹೀರಿದ ಸುವಾಸನೆಯಿಂದಲೇ ಸರಿಪಡಿಸಬಹುದು. ಅಲ್ಲದೇ ಈ ವಾಸನೆಯಿಂದಲೇ ದೇಹದ ಸ್ಥಿತಿಯನ್ನೇ ಬದಲಾಯಿಸಬಹುದು. ಬೇಸರವನ್ನು ಹೋಗಲಾಡಿಸಿ ಉತ್ಸಾಹ ಭರಿಸಬಹುದು ಸೆಕೆಯ ಚಡಪಡಿಕೆಯನ್ನು ದೂರಗೊಳಿಸಿ ತಂಪಿನ ಅನುಭವವುಂಟು ಮಾಡಬಹುದು. ಒಂದು ಅನಿಲವನ್ನು ಮೂಸಿ ನಗುವಂತೆ ಮಾಡಬಹುದು. ಈರುಳ್ಳಿ ರಸ ಮೂಸಿ ಕಣ್ಣಲ್ಲಿ ನೀರು ಬರುವಂತೆ ಮಾಡಬಹುದು, ಕ್ಲೋರೋಫಾರಮ್ ಮೂಸಿ ಶಸ್ತ್ರ ಚಿಕಿತ್ಸೆಯ ನೋವೆ ಆಗದಂತೆ ಮಾಡಿಕೊಳ್ಳಲೂಬಹುದು. ಅಶ್ರುವಾಯುವಿನ ಮೂಲಕ ಮನುಶ್ಯರನ್ನು ಅಳಿಸಲೂಬಹುದು. ಕೊಳೆತ ವಸ್ತುವಿನ ದುರ್ನಾತದಿಂದ (ವಾಸನೆಯಿಂದ) ಗಬ್ಬೆಂದು ದೂರ ಹೋಗಬಹುದು. ಈ ರೀತಿ ಅನೇಕ ವಾಸನೆಗಳನ್ನು ಗ್ರಹಿಸುವ ಮೂಗಿನ ಮಹತ್ವ ಮನುಷ್ಯನ ಬದುಕಲಿ ಅತ್ಯವಶ್ಯಕವಾಗಿದೆ. ಮೂಗೇ ಇಲ್ಲದಿದ್ದರೆ ಸುವಾಸನೆ, ಅಥವಾ ದುರ್ವಾಸನೆಗಳನ್ನರಿದೇ ಮೂಗನಾಗಿ, ಕೊರಡಾಗಬಹುದುಲ್ಲವೆ? ಒಂದು ವೇಳೆ ಮೂಗಿನಿಂದ ಈ ಯಾವ ವಾಸನೆಗಳನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೂಂಡ ಮನುಷ್ಯರಿಗೆಂದೇ ವಾಸನೆಗಳನ್ನು ಗ್ರಹಿಸುವ ಕೃತಕ ಮೂಗನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.
ಈ ಮೂಗಿಗೆ “ಸೈರೊನೋಸ್ ೨೦೦೦” ಎಂದು ಹೆಸರಿಟ್ಟಿದೆ. ಇದಕ್ಕೆ ‘ಈನೋಸ್’ ಎಂದೂ ಕೂಡ ಕರೆಯಲಾಗುತ್ತದೆ. ಒಬ್ಬ ಆರೋಗ್ಯವಂತನ ಮೂಗು ೬೫೦ ವಿಧದ ವಾಸನೆಗಳನ್ನು ಗುರುತಿಸಬಲ್ಲದೆಂದು ಮೂಗಿನ ತಜ್ಞರು ಹೇಳುತ್ತಾರೆ. ಈ ಕೃತಕ ಮೂಗಿನ ಸಾಮರ್ಥ್ಯ ಅಷ್ಟಿಲ್ಲದಿದ್ದರೂ ಮುಂದೆ ಇದನ್ನು ಅಭಿವೃದ್ಧಿಪಡಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಬೆಲೆ ೮ ಸಾವಿರ ಡಾಲರ್ ಇದೆ. ಈ ಕೃತಕ ಮೂಗು ಇದ್ದವರಿಗೆ ಉಪಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಇದು ರೋಗಗಳನ್ನು ಮೂಸಬಲ್ಲದು. ಇದನ್ನು ಇಂಗ್ಗೆಂಡ್ ಓಸ್ಮೆಟಿಕ್ ಕಂಪನಿ ತಯಾರಿಸಿದೆ. ಇದು ವಿಷಾಣುಗಳನ್ನು ಗುರುತಿಸಿ ಯಾವುದರಿಂದ ಕಾಯಿಲೆ ಬರುತ್ತದೆಂದು ಕಂಡು ಹಿಡಿದು ಯಾವ ಔಷಧಿಗಳಿಂದ ಗುಣಪಡಿಸಬಹುದೆಂದು ತಿಳಿಸುತ್ತದೆ. (ಸೂಚಿಸುತ್ತದೆ)
ಮುಂದೊಂದು ದಿನ ಇದರ ಬೆಲೆಯಲ್ಲಿ ಇಳಿಕೆಯಾದರೆ ಸಾಮಾನ್ಯ ಜನರೂ ಇದನ್ನು ಉಪಯೋಗಿಸಬಹುದು. ಆಗ ಯಾವ ದಾರಿಯಲ್ಲಿ ಸಾಗಬಹುದು, ಎಲ್ಲಿ ದುರ್ವಾಸನೆ ಇದೆ ಯಾವ ಹೋಟೆಲಿನ ಆಹಾರ ದೇಹಕ್ಕೆ ಒಗ್ಗಲಾರದು. ಯಾವ ತೋಟದ ಹೂವು ಮನಸ್ಸಿಗೆ ಅಲ್ಹಾದಕರ ಎಂಬ ಎಲ್ಲ ಮಾಹಿತಿಗಳು ಈ ಮೂಗು ಹೊಂದುವವರಿಗೆ ತಿಳಿಯಬಹುದು. ಸಹಜ ಮೂಗಿನಂತೆ ಬಳಸಿ ಇದೆಲ್ಲವನ್ನು ತಿಳಿಯಬಹುದು. ಇದು ಇನ್ನು ಬಹಳ ಆವಿಪ್ಕಾರ ಹೊಂದಬೇಕಿದೆ ಅಲ್ಲಿಯವರೆಗೆ ಆಕಾಂಕ್ಷಿಗಳು ಕಾಯಬೇಕಿದೆ.
*****