ಪ್ಲಾಸ್ಟಿಕ್ ಮಾಯೆ ಎಂಥಹ ಅಪಾಯಕಾರಿ ಎಂಬುವುದು ಎಲ್ಲರಿಗೂ ಗೊತ್ತು. ದನಕರುಗಳಿಗೆ ತೊಂದರೆ, ನೀರನ ಹರಿವಿಗೆ ತಡೆ, ಬೆಳೆಗಳ ಬೇರುಗಳಿಗೆ ತೊಂದರೆ ಅಲ್ಲದೇ ಇವುಗಳಿಂದ ಪರಿಸರಮಾಲಿನ್ಯ ಕೂಡಾ ಯತೆಚ್ಚೆವಾಗಿ ಆಗಿ ಮಾನವನಿಗೆ ಮಾರಕವಾಗುವ ವಿಷಯ ತಿಳಿದಿದೆ. ದನಗಳು ತಿಂದರೆ ಸತ್ತುಹೋಗುತ್ತವೆ, ಮನುಷ್ಯ ತಿಂದರೆ ಕರುಳನ್ನು ಸುತ್ತಿಸಿಕೊಂಡು ಮರಣ ಅಪ್ಪುತ್ತಾನೆ. ಭೂಮಿಯಲ್ಲಿ ಹೂತರೆ ನೂರಿನ್ನೂರು ವರ್ಷವಾದರೂ ಕರಗದೇ ಇರುತ್ತದೆ. ಇವುಗಳನ್ನು ಸುಟ್ಟುಹಾಕಿದರೆ ಇದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಹೊಗೆ (ಇಂಗಾಲ ಡೈ ಆಕ್ಸೈಡ್) ಯು ಮನುಷ್ಯನ ಉಸಿರಾಟವನ್ನೇ ನಿಲ್ಲಿಸಿ ಬಿಡುತ್ತದೆ. ಇಂಥಹ ಅಪಾಯಕಾರಿ ಪಾಲಿಥಿನನ್ನೇ ತಡೆಹಿಡಿಯಬೇಕೆಂದು ಸರಕಾರ ಆಜ್ಞೆ ಹೊರಡಿಸಿದರೂ ಸಫಲವಾಗಲಿಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥಮಾಡಿಕೊಳ್ಳದೇ ಈ ಮಾಯೆಗೆ ಮರುಳಾಗಿದ್ದಾರೆ.
ಇಂಥಹ ಸಂದರ್ಭದಲ್ಲಿ ಛತ್ತೀಸಗಡದ ಯುವ ವಿಜ್ಞಾನಿ ಅವಧಿಯ ಎಂಬುವರು ಸೊಸೈಟಿ ಫಾರ್ ಪಾರ್‍ಥೆನಿಯಂ ಮ್ಯಾನೋಜಮೆಂಟ್ ಸಂಯೋಜಕರಾಗಿದ್ದುಕೊಂಡು ಈ ಪ್ಲಾಸ್ಟಿಕನ್ನು ತಿಂದು ಅರಗಿಸಿಕೊಳ್ಳಬಲ್ಲ ಕೀಟಗಳನ್ನು ಪತ್ತೆಹಚ್ಚಿದ್ದಾರೆ. ೧೩೫ ಕೀಟಗಳ ಮೇಲೆ ಪ್ರಯೋಗ ನಡಿಸಿದ (೨ ವರ್ಷ) ‘ಅವಧಿಯಾ’ ಎಂಬ ವಿಜ್ಞಾನಿ ಇವುಗಳಲ್ಲಿ ೫ ಕೀಟಗಳು ಈ ಪಾಲಿಥಿನನ್ನು ತಿಂದು ಅರಗಿಸಿಕೊಳ್ಳಬಲ್ಲದೆಂದು ದೃಢೀಕರಿಸಿದ್ದಾರೆ. ಈ ‘ಪ್ಲಾಸ್ಬಿಕ್ ಬಗ್’ ಅನ್ನು ತಾನು ೧೯೯೯ರಲ್ಲಿ ಕಂಡು ಹಿಡಿದಿದ್ದಾಗಿ ಹೇಳಿದ್ದಾರೆ. ಚಳಿಗಾಲದಲ್ಲಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆ ಎಂದೂ ಹೇಳಿದ್ದಾರೆ.
*****