ಕಾಯೋ ತಂದೆ

ಕಾಯೋ ತಂದೆಯೆ ಕಂದನ ಸದಯ
ಕನವರಿಸುತಲಿದೆ ನನ್ನೀ ಹೃದಯಾ || ಪ ||

ಕಾಲಿವು ಕೆಸರಲಿ ಹೂತಿವೆ ಜೀಯಾ
ತಲೆಯಿದು ಮುಗಿಲಿಗೆ ನೋಡುತಿದೆ
ಅರಳಿದ ಸುಮಗಳು ಅಣಕಿಪವೆನ್ನ
ಹಾರುವ ಹಕ್ಕಿಯು ಕರೆಯುತಿದೆ || ೧ ||

ಗಗನ ಕುಸುಮಗಳು ಕನಸಾಗುತಿವೆ
ಭೂಮಿಯ ಬವಣೆಯು ಹಿಂಡಿದೆ ಹರಣಾ
ಚೇತನ ಲತೆಯದು ಕಡುಬಾಡುತಿದೆ
ಯಾತನೆ ಬೆಂಕಿಯು ಕರೆದಿದೆ ಮರಣಾ || ೨ ||

ಆಸೆ ಚಿಕ್ಕೆಗಳು ಮೈಗರೆಯುತಿವೆ
ನಂಬಿಕೆ ನಾವೆಯು ಹೊಯ್ದಾಡುತಿದೆ
ಹಂಬಲ ಹಸಿವದು ಹಿಂಗದು ತಂದೇ
ನಿನ್ನಯ ಕಾಣದೆ ಬಳಲಿದೆ ಬೆಂದೆ || ೩ ||

ತಪ್ಪು ಹೆಜ್ಜೆಗಳು ಕತ್ತಲಿನೆಡೆಗೆ
ಸಾಗಿವೆ ಸುತ್ತಲು ಬಲೆ ಹೆಣೆದಿರಲು
ಕರೆವವರಿಲ್ಲದೆ ನಡೆಸುವವರಿಲ್ಲದೆ
ಕರೆದಿಹೆ ದೇವಾ ಹಗಲೂ ಇರುಳು || ೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರುಣನ ಕೇಳು
Next post ಬ್ರೇಕ್ಟನ The Caucasian Chalk Circle

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…