ಒಂದು ದಿನ
ಸಿಟ್ಟಿನ ಭರದಲ್ಲಿ
ಪರಮೇಶ್ವರನಿಗೆ ನಾನು
ತಾಯಿ ಮೇಲೆ ಬೈದೆ
ಅವನುಲೋಕಾಭಿರಾಮವಾಗಿ
ಚಕ್ಕನೆ ನಕ್ಕ
ಪಕ್ಕದ ಮನೆಯ ಬೋರ
ಮುಖವನು ಬರಿದೆ ಕುಗ್ಗಿಸಿ
ಅಂಟು ಮೋರೆಯ ಗಂಟು ಹಾಕಿ
ಸವಾಲು ಮಾಡಿದ
‘ಯಾಕಯ್ಯ ನೀನು’ ಹೀಗೆ
ಆ ನಿರ್ಗುಣ, ನಿರಾಕಾರ
ಅನಾಥ ಜಗನ್ನಾಥನಿಗೆ
ಏನಾದರೂ ಅನ್ನುತ್ತಿ
ಶಬ್ದ ಜಾಲದಲಿ ಅವನ
‘ಧರ್ಮಫಣಿಯನ್ನು ಹಿಡಿಯುತ್ತಿ’
ಇನ್ನೊಮ್ಮೆ ಬೈದೆ ಬಿಗಿಯಾಗಿ
ವಿದ್ಯಾಪೀಠದ ಗೋಡೆ ಬಿರಿಯಿತು
ಮನುಷ್ಯ ಏಕೆ ಸಿಟ್ಟಾಗುತ್ತಾನೆ?
ಈ ವಿಷಯದ ಕುರಿತು ಅಲ್ಲಿ
ಶೋಧ ನಡೆದಿದೆ.
ಹೊಗೆಬತ್ತಿಯ ಧೂಮ ತುಂಬಿದ
ಹೊಟ್ಟೆಯಲ್ಲಿ
ಭಾವವಿಹ್ವಲ ಚರ್ಚೆ ನಡೆದಿದೆ
ನನ್ನ ಹುಟ್ಟು ದಿನದಂದು
ದೇವನಿಗೆ ಇನ್ನೊಮ್ಮೆ ಬೈದೆ
ಚಾಬೂಕಿನೇಟಿನಂತೆ
ಶಬ್ದದೇಟುಗಳ ಒಂದೇ ಸವನೆ
ಬಿಗಿದು ಹೇಳಿದೆ
‘ಪಾಪಿ ಮಗನೆ’ ಮುರುಕು ಭಾಕರಿಗಾಗಿ
ಸರಕು ಕಟ್ಟಿಗೆಯ ಮುರಿಸುವೆ
ತಾಯಿ ಉಟ್ಟ ಚಿಂದಿ ಬಟ್ಟೆಯ ಚೂರಿನಿಂದ
ಬಡಕಲು ಮೈಯ ಒರಸುವೆ
ಗುಟುಕು ಸೆರೆಯ ತೃಷೆಗಾಗಿ
ಕುಂಟಣಿಯನಾಗಿಸುವೆ, ದೇವ
ಆಗದಿದು ಬಾಳಲು ನಿನಗೆ
ಅದಕಾಗಿ ಮಣ್ಣಿನಲಿ ಹೋರುವ
ಶಪಿತ ಪ್ರೇಮಲ, ವತ್ಸಲ,
ತಾಯಿಯಾಗಬೇಕು’
ಬೋರ ನಕ್ಕ
ನಾನು ಬೈದಾಗ ಅವನೂ ನಕ್ಕನೇನೋ?
*****
ಮೂಲ: ಕೇಶವ ಮೆಶ್ರಾಮ
(ಮರಾಠಿ)
Related Post
ಸಣ್ಣ ಕತೆ
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಮನೆ “ಮಗಳು” ಗರ್ಭಿಣಿಯಾದಾಗ
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಅಪರೂಪದ ಬಾಂಧವ್ಯ
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…