ಪುಷ್ಪ… ಪುಷ್ಪ…

ಪುಷ್ಪ… ಪುಷ್ಪ…
ಕಣ್ಣು ಪುಷ್ಪ ನೋಟ ಪುಷ್ಪ
ನುಡಿವ ಮಾತು ಮಿಡಿವ ಹೃದಯ
ನಗೆಯೂ ಬಗೆಯೂ ಪುಷ್ಪ ಪುಷ್ಪ ||ಪ||

ಒಲುಮೆ ಪುಷ್ಪ ನಲುಮೆ ಪುಷ್ಪ
ಚಲನ ವಲನ ಮಿಲನ ಪುಷ್ಪ
ಕರುಣೆ ಪುಷ್ಪ ಸ್ಫುರಣೆ ಪುಷ್ಪ
ಕಣ್ಣೂರಲ್ಲಿ ತಳೆದ ಪುಷ್ಪ
ಕನಸಾಗುವುದೆ? ನನಸಾಗುವುದೆ?
ಕನವರಿಕೆಯಲಿ ಕೃಪೆ ಕಾಣುವುದೆ? ||೧||

ಸರಳ ಪುಷ್ಪ ವಿರಳ ಪುಷ್ಪ
ಅರಳು ಮರಳು ಕರುಳು ಪುಷ್ಪ
ಸನಿಹ ಪುಷ್ಪ ದೂರ ಪುಷ್ಪ
ಸ್ನೇಹಾಂತರದ ಸಿಹಿಯು ಪುಷ್ಪ
ಸಿಹಿಯಾಗುವುದೆ? ಕಹಿಯಾಗುವುದೆ?
ಕಾಣದ ಕಡಲಿಗೆ ಕರೆದೊಯ್ಯುವುದೆ? ||೨||

(ಲಾಲ್‌ಬಾಗ್‌ನ ಪುಷ್ಪೋದ್ಯಾನದಲ್ಲಿ ಮನ ಸೆಳೆದ ಪುಷ್ಪವೊಂದರ ಪ್ರೇರಣೆಯಲ್ಲಿ ಮೂಡಿದ ಕವಿತೆ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವ ಬಂಧನ
Next post ಏರಿಕೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…