ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ
ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ
ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ?
ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ//
ಹಗಲು ರಾತ್ರಿಗಿರುವ ಬೇಧ ಮರೆತು ಹೋಗಿದೆ
ಹಸಿವು ಬಾಯಾರಿಕೆ ಜೊತೆಗೆ ಕಳೆದು ಹೋಗಿದೆ
ಕಣ್ಣು ಬಿಟ್ಟರೆ ನೀನೆ; ಮುಚ್ಚಿದರೂ ಸಹಿತ
ಇಂಥಾ ನನ್ನೊಡನೆ ಸರಿಯೆ ಕಣ್ಣಾ ಮುಚ್ಚಾಲೆಯಾಟ!
ನೂರು ರಾಗ ಹೊಮ್ಮಿವೆ ನಿನ್ನನು ಅರಸಿ
ಒಂದೆ ದನಿ ಅಲ್ಲಿದೆ ನಿನ್ನನು ಬಯಸಿ
ಆದರೂ ನಿನಗಿಲ್ಲವೆ ಅಂತಃಕರಣ
ಸಿಗದೆ ಕಾಡಲು ನೀ ಹೇಳು ಏನು ಕಾರಣ
ಪ್ರೀತಿಯ ಕರೆ ಕೇಳಲು ಕರುಳಿದ್ದರೂ ಸಾಕು
ಅದು ತುಂಬಿ ಮೊರೆಯಲು ಕೊರಳು ಏಕೆ ಬೇಕು
ಅರಿವಾಗದೆ ಇದು ನಿನಗೆ? ಆತ್ಮವಂಚನೆ ಬೇಡ
ವಿರಹ ಗೀತೆಯೇ ಹಿತವೆ? ಸುಳ್ಳು ಹೇಳಬೇಡ
*****