ನೀ ಮನಸು ಮಾಡೆನ್ನ

ನೀ ಮನಸು ಮಾಡೆನ್ನ
ಕ್ಷಮಿಸೋ ದೇವಾ
ಅರಿತೋ ಅರಿಯದಲೋ
ತಪ್ಪಮಾಡ್ಡಿದ್ದರೆ ನಾನು|
ಸಕಲರ ರಕ್ಷಕ ಆರಕ್ಷಕ
ಮೂಜಗದೊಡೆಯನೇ
ಪಾಲಿಸೋ ಎನ್ನ ನೀನು||

ವಿದ್ಯೆ ವಿಜ್ಞಾನ ಅರಿಯೇ ನಾನು
ತರ್ಕ ವಿತರ್ಕಗಳ ತಿಳಿಯೇ ನಾನು|
ಅಂಕ ಸಂಖ್ಯಾದಿ ವಿವರಗಳ
ಬರೆಯಲು ಬಾರದವ ನಾನು
ತಿಳಿದಿರುವುದೊಂದೆ ನಿನ್ನಾ….
ಕಣ್ಣಮುಚ್ಚಿ ನಂಬುವುದು||

ಪಾಪ ಕರ್ಮವ ತಿಳಿಯೆ ನಾನು
ಪುಣ್ಯಫಲವನು ಅರಿಯೆ ನಾನು|
ಜೀವನ ಹೇಗೆ ನಡೆವುದೋ
ಹಾಗೆ ನಡೆದು ಬಂದೆ ನಾನು|
ಅಂಧನಿಗೆ ಊರುಗೋಲು ಆಸರೆಯಂತೆ
ಕರುವು ಆಕಳ ಅನುಸರಿಸುವಂತೆ
ನಿನ್ನ ನಂಬಿ ಎಲ್ಲವನು ಕಂಡೆ ನಾನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಬಾರಿ ಮುಗುಳು ನಗೆ
Next post ಕೋರಿಕೆ ಮನಕ್ಕೆ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…