ಮಗುವೇ ನಿನ್ನದೊಂದು

ಮಗುವೇ ನಿನ್ನದೊಂದು
ಮುದ್ದಾದ ನಗುವಿನಿಂದಲೇ|
ಜಗದ ಎಲ್ಲಾ ನೋವ ಕ್ಷಣದಿ
ಮಾಯ ಮಾಡಿ ಬಿಡುವೆ||
ಮಗುವೇ ನಿನ್ನ ನಗುವೇ…

ಸಮ ಯಾವುದಿದೆ ನಿನ್ನ
ತಾವರೆ ಕುಡಿ ಕಣ್ಣ ಕಾಂತಿಗೆ ||
ನಿನ್ನ ಹಸಿಮೈಯ
ಹಾಲುಗೆನ್ನೆಯ ಮೃದು
ಕಮಲದಳದಂತಿಹ
ತುಟಿಗಳಲಿ ಹೊರಸೂಸುವ
ನಗೆಯ ನೂರು ಬಗೆ ಬಗೆಗೆ|

ನಗಲು ನೀನು ತುಂಬು
ಹುಣ್ಣಿಮೆ ಚಂದ್ರಮನ
ಹೊನಲು ಹರಿದಂತೆ|
ಅವರಿವರನು ಅಣಕಿಸಿ
ನಗುತಿರಲು ನೀನು
ನಗೆಬುಗ್ಗೆ ಚಿಮ್ಮಿದಂತೆ||
ಏಷ್ಟೋ ತಾಯಿಜೀವಗಳು
ಎಲ್ಲಾ ಸರ್ವಸ್ವವನು ಕಳಕೊಂಡರೂ
ನೋವ ನುಂಗಿ ಬದಕಿರುವದೇ ನಿನ್ನ
ನಗುವಲಿರುವ ಅಗಾಧ ಶಕ್ತಿಯಿಂದಾಗಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರು ಎಲ್ಲಿದ್ದಾನೆ?
Next post ಬೆಳಕಿನ ಪ್ರಪಂಚ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…