ದೇವರು ದೊಡ್ಡವನು. ಮನುಷ್ಯನಿಗೆ ಅನುಕೂಲವಾಗಲೆಂದೇ ಎರಡು ಕಿಡ್ನಿಗಳನ್ನು ನೀಡಿದ್ದಾನೆ!
ಚೀನಾದ ಬೀಜಿಂಗ್‌ನ ಜಿನ್‌ಹುವಾ ನಗರದ ದೊನ್‌ಗ್ಯಾಂಗ್ ಪೀಪಲ್ಸ್ ಆಸ್ಪತ್ರೆಯಲ್ಲಿ ದಿನಾಂಕ ೨೮.೦೭.೨೦೧೫ರಂದು ಮಂಗಳವಾರ ದಿನದಂದು ಸತತವಾಗಿ ಎರಡು ತಾಸುಗಳವರೆಗೆ ನಡೆದ ತುರ್ತು ಶಸ್ತ್ರಚಿಕಿತ್ಸೆಯಲ್ಲಿ ಹೇ ಡಾಂಗ್ ಎಂಬ ವ್ಯಕ್ತಿಯ ಎಡಬದಿಯ ಕಿಡ್ನಿಯಿಂದ ಸುಮಾರು ೪೨೦ ಕಲ್ಲುಗಳನ್ನು ವೈದ್ಯರು ಹೊರತೆಗೆದು ವ್ಯಕ್ತಿಯನ್ನು ಬದುಕಿಸಿದ್ದಾರೆ.
ಈ ವ್ಯಕ್ತಿ ಹೆಚ್ಚು ಜಿಪ್ಸಂ ಟೊಪು ಖಾದ್ಯ (ಬರೀ ಖನಿಜಯುಕ್ತ ಆಹಾರವನ್ನು) ಸೇವಿಸುತ್ತಿದ್ದ ಹಾಗೂ ನೀರು ಕುಡಿಯುವ ಹವ್ಯಾಸವೇ ಇರಲಿಲ್ಲ..!
“ಈ ಸೋಯಾ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ. ಜಿಪ್ಸಂ ಟೊಪು ಸಹ ಅದರಿಂದಲೇ ತಯಾರಾಗುತ್ತಿದ್ದು ಹೆಚ್ಚಿನ ನೀರು ಕುಡಿದು ಬೆವರು ಭಸಿಯುವ ಕೆಲಸ ಮಾಡುವುದರಿಂದ ಮಾತ್ರ ಈ ಥರದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯ…” ಎಂದು ವೈದ್ಯರಾದ ವೈಯುಬಿನ್ ಅವರು ವಿವರಿಸಿದ್ದಾರೆ.
ಹೇ ಡಾಂಗ್‌ಂಗೆ ತೀವ್ರ ಹೊಟ್ಟೆ ನೋವು ಕಾಣಿಸಿದ್ದರಿಂದ ಸಿಟಿ ಸ್ಕ್ಯಾನ್ ಮಾಡಲಾಯಿತು. ಕಿಡ್ನಿಯಲ್ಲಿ ಅಪಾರ ಪ್ರಮಾಣದಲ್ಲಿ ಕಲ್ಲುಗಳು ತುಂಬಿ ತುಂಬಿ ಹೋಗಿದ್ದವು! ಆಗ ಸತತವಾಗಿ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ೪೫ ನಿಮಿಷಗಳಲ್ಲಿ ಕಲ್ಲುಗಳನ್ನು ಹೊರತೆಗೆಯಲಾಯಿತು. ಅಷ್ಟೊಂದು ಕಲ್ಲುಗಳನ್ನು ತೆಗೆದು ನನ್ನ ಕೈ ಹಾಗೂ ಬೆರಳುಗಳು ಮರಗಟ್ಟಿದ್ದವು…. ಎಂದು ವೈದ್ಯರು ಅಲ್ಲಿ ಸೇರಿದ್ದ ಜನರಿಗೆ ವಿವರಿಸಿದರು.
ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ೨-೩ ಲೀಟರ್ ನೀರನ್ನು ಕಡಿಮೆ ಎಂದರೂ ಕುಡಿಯಲೇಬೇಕು. ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಕಿಡ್ನಿಗಳು ಸರಿಯಾಗಿ ಕೆಲಸ ಮಾಡಲು ನೀರು ಬೇಕೇಬೇಕು.
ಆದ್ದರಿಂದ ಹೆಚ್ಚು ಹೆಚ್ಚು ದ್ರವರೂಪದ ಆಹಾರ ಸೇವಿಸಲೇ ಬೇಕು. ಏನಂತಿರಾ?! ಹೌದು ಅಂತೀರಿ. ಅನ್ನಲೇಬೇಕು.
*****