ಪಂಚಭೂತ

ಈ ಭೂಮಿ ನಮ್ಮದು ಆಕಾಶ ನಮ್ಮದು
ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು ||

ನಮ್ಮ ಭೂಮಿ ಗರ್ಭದಲ್ಲಿ
ಭ್ರೂಣಗಳ ಕೊಂದರು
ಆಕಾಶದ ಅನಂತವನ್ನು
ಆಪೋಶನೆಗೊಂಡರು
ಬೀಸೊ ಗಾಳಿ ಎದುರು ನಿಂತು
ಗಾಳ ಹಾಕಿ ಹಿಡಿದರು
ಕುಡಿವ ನೀರ ಕಣ್ಣ ಕಳೆದು
ಕುರುಡಾಗಿಸಿಬಿಟ್ಟರು
ಬೆಂಕಿ ಹಿಡಿದು ಎಗರಿ ಕುಣಿದು
ಕನಸುಗಳ ಸುಟ್ಟರು ||

ಬಿರುಕು ಬಿಟ್ಟ ಭೂಮಿಯಲ್ಲಿ
ನಿಟ್ಟುಸಿರು ನರಳಿದೆ
ಆಕಾಶದ ಅಳುವಿನಲ್ಲಿ
ಇತಿಹಾಸದ ಕೊರಗಿದೆ
ಗಾಳದಲ್ಲಿ ಸಿಲುಕಿ ನಿಂತ
ಗಾಳಿ ಗೂಳಿ ಆಗಲಿದೆ
ನೀರು ಹರಿದು ನೆಲದ ತುಂಬ
ಕನಸ ಕಣ್ಣು ಮೂಡಲಿದೆ
ಬೆಂಕಿ ಸುತ್ತ ಸೆಟೆದು ನಿಂತು
ಕನಸುಗಳ ಕಾಯಲಿದೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿಡ್ನಿ ಕತೆ
Next post ಮರದ ಆಶ್ವಾಸನೆ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…