ಭವ್ಯ ಭಾರತ ಭೂಮಿ ನಮ್ಮದು
ನಮ್ಮ ತಾಯಿಯು ಭಾರತಿ
ನಾವು ಅವಳ ಮಡಿಲ ಮಕ್ಕಳು
ಅದುವೆ ನಮ್ಮ ಕೀರುತಿಯು ||
ಆ ಹಿಮಾಲಯ ಕನಾಕುಮಾರಿಯು
ನಡುವೆ ಹರಡಿದೆ ಭಾರತ
ನಮ್ಮ ಭಾರತ ಸ್ವರ್ಗ ಭೂಮಿಯು
ನಾವು ಪಡೆದಿಹ ಸುಕೃತವು ||
ಪುಣ್ಯ ನದಿಗಳು ಹಸಿರು ವನಗಳು
ಸಾಧು ಸಂತರ ನೆಲೆಬೀಡಿದು
ವನ್ಯ ಧಾಮ ವಿಹಾರ ಸ್ಥಳಗಳು
ಎಲ್ಲಾ ಇಲ್ಲಿವೆ ಕಣ್ಗಳ ತಣಿಸಲು ||
ನೂರು ವೇಷದ ಹಲವು ಭಾಷೆಯ
ಅನಾದಿ ಧರ್ಮಗಳ ಮನೆಯು
ರಾಷ್ಟ್ರದೈಕ್ಯತೆಯಲ್ಲಿ ನಾವು
ಒಂದು ಗೂಡುವ ಮನಗಳು ||
ವೀರಪುರುಷ ರಮಣಿಯರು
ಆಳಿಬಾಳಿದ ಭುವಿ ಇದು
ಸತ್ಯಧರ್ಮದ ಮೆಟ್ಟಿನಿಲ್ಲುವ
ಸತ್ಯವಂತರ ನಾಡಿದು
ಬುದ್ಧ ಗಾಂಧಿ ವಿವೇಕಾನಂದರು
ಹುಟ್ಟಿ ಬೆಳದಿಹ ನಾಡಿದು
ದಿವ್ಯ ಭವ್ಯ ನಾಡ ಸಂಸ್ಕೃತಿ
ಕಂಡ ಭಾರತ ನಮ್ಮದು ||
ಭರತ ಭೂಮಿಯೇ ನಮ್ಮ ತಾಯಿಯು
ನಮ್ಮ ಪೊರೆಯುವ ಶಕ್ತಿಯು
ಬೇಡ ಅನ್ಯರ ನೆಲವು ಎಂದಿಗು
ನಮಗೆ ಭಾರತ ನಾಡು ಸ್ವರ್ಗವು ||
*****