ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ
ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ
ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ
ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ
ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ
ಅನವರತ ನಿನ್ನ ನೆನಹು ತುಂಬಲಿ
ಭಾನುವಿನಂತೆ ನಂಬಿಕೆ ದೃಢವಿರಲಿ
ನಿನ್ನ ರೂಪದ ಛಾಯೆವಿರಲಿ ಈ ನಯನ ಬಿಂಬಲಿ
ನಿನ್ನ ಕಂಗಳ ಭಾವದಲಿ ನಾ ತೇಲಲಿ
ನಿನ್ನ ಪಾದದಲಿ ಭಾವ ಪರಾಕಾಷ್ಠೆಗೇರಲಿ
ನಿನ್ನ ಕೃಪೆಯ ಸಾಗರ ನನ್ನ ಮನದಲಿ ಹರಿಯಲಿ
ನಿನ್ನ ಪಡೆಯುವ ಗುರಿ ನನ್ನ ನಿಷ್ಠೆಗೇರಲಿ
ಹರಿಯೆ ನೀನು ಪರಮಾತ್ಮ ನಾನಾತ್ಮ
ನಿನಗಲ್ಲದ ಸಹನೆ ನನ್ನಗೆಲ್ಲುಂಟು!
ನನ್ನ ನಡೆಸುವಂತೆ ನೋಡುವಾತನು ನೀನು
ಮಾಣಿಕ್ಯ ವಿಠಲನಿಗೆ ಏಕೆ ಕರ್ಮಗಂಟು!!
*****