ಗೆಳೆಯ ಬಾಳಿನ ಅಂಗಳಕ್ಕೆ ಬಂದೆ
ಇದೇ ಶಾಶ್ವತವೆಂದು ನೀನು ತಿಳಿದೆ
ಹೊನ್ನು ಮಣ್ಣಿನಾಸೆಯಲಿ ಬೆರೆತೆ
ನನ್ನದೆಂಬ ಅಹಂದಲಿ ನಿ ಉಳಿದೆ
ನೀನು ಈ ಭವದಿ ಹೋಗುವುದು ಸತ್ಯ
ಅದರ ಬಗ್ಗೆ ನಿನಗಿರಲಿ ಚಿಂತನೆ ನಿತ್ಯ
ನಿನ್ನೊಂದಿಗೆ ಯಾರು ಅಲ್ಲಿ ಬರುವದಿಲ್ಲ
ಮಾಡಿಕೊಳ್ಳದಿರು ಬಾಳು ಸ್ವಾರ್ಥದಿ ಹತ್ಯೆ
ನೀನು ಮಾಡಿದ ಕರ್ಮ ಹೋಗಲಿದೆ ಅಲ್ಲಿ
ನೀನು ಸಂಚಯಿಸಿದ ಸಿರಿ ಇರುವುದು ಇಲ್ಲಿ
ನಾಳಿನ ಸಾರ್ಥಕತೆಗೆ ಇಂದು ಮಾಡಿದ್ದೇನು!
ಇಲ್ಲದಿರೆ ಮತ್ತೆ ಬದುಕಿನಾಚೆಗಿನ ಸಿದ್ಧತೆ ಏನು
ನಿನ್ನ ತನು ಮನದಲಿ ತುಂಬಿಕೊಳ್ಳಲಿ ಭಕ್ತಿ
ಹರಿಯ ಚಿಂತನೆ ಮಾತ್ರ ನಿರಂತರ ಸಾಗಲಿ
ನಿನ್ನ ಪಾಪಗಳೆಲ್ಲ ತಾನೇ ತೊಳೆದು ಹೋಗಲಿ
ಮಾಣಿಕ್ಯ ವಿಠಲನ ಬಾಳು ಭವ್ಯವಾಗಲಿ
*****