ಮುಳ್ಳುಜಾತಿಯ ಎಲ್ಲಾ ಹೂಬಳ್ಳಿಗಳನ್ನು ಸರಿಸಿ ನೋಡಿದರೆ
ಜೇಡಿಮಣ್ಣಿನ ಮನೆ; ಅದಕ್ಕಂಟಿಕೊಂಡೇ ಬೆಳೆದ ಜಮ್ಮುನೇರಳೆ ಮರ.
ಆ ಮರದ ರೆಂಬೆಕೊಂಬೆಗಳಲಿ ಬಣ್ಣಬಣ್ಣದ ಉಡುಪುಗಳು
ನೇತಾಡುವ ಹಕ್ಕಿಗಳಂತೆ ಕಾಣಿಸಿಕೊಳ್ಳುತ್ತಿದ್ದವು.
ಕುದುರೆಗಾಡಿ, ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್
ದಿನಪೂರ್ತಿ ಓಡಾಡಿರಬಹುದಾದ ಜಾಡನ್ನು
ಗುರುತಿಸಬಹುದಾಗಿತ್ತು ಅಲ್ಲೇ ಎಲ್ಲೋ.
ಚಾವಣಿಯಿಂದ ಉದುರುವ ಹಿಮಗಾಲದ ಹುಳುಗಳಂತೆ
ವಿವಿಧ ಜಾತಿಯ ಹೆಣ್ಣುಗಳು ಅಲ್ಲಿ ಒಂಟಿಮಂಚದ
ಒಂದೇ ಹೊದಿಕೆಯ ಮೇಲೆ ವಿಕೃತ ಚಿತ್ರಗಳಾಗುತ್ತಿದ್ದದ್ದು
ಬೆಳಕಿಗೆ ಬಂತು.
*****