Home / ಲೇಖನ / ವಿಜ್ಞಾನ / ಹೊಸ ತಳಿಯ ಜಾಮ್! ಜೆಲ್ಲಿ!!

ಹೊಸ ತಳಿಯ ಜಾಮ್! ಜೆಲ್ಲಿ!!

ಹಸಿರು ಸೂರ್ಯಕಾಂತಿ ಹೂಗಳು ಸಂತೃಪ್ತವಾಗಿ ಮತ್ತಷ್ಟು ಪೋಶಕಾಂಶಗಳಿಂದ ಕಂಗೊಳಿಸಲು ಹಸುವಿನ ಹಾಲು, ರಂಗುರಂಗಿನ ಹೂವಿನ ಪಕಳೆಗಳು ನಿಮಗೆ ದೊರೆಯಲು ಇನ್ನೂ ೫೦ ವರ್ಷಗಳಷ್ಟೇ ಸಾಕು. ಆಹಾರ ಸತ್ವ ಸಮೃದ್ಧ ಟೊಮ್ಯಾಟೊ ಹೊಸ ತಳಿ ಈಗಾಗಲೇ ಅಮೇರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಲಿವೆ. ಕೃಷಿ ಉತ್ಪಾದನೆಯ ಶೇ. ೫೦ ರಷ್ಟು ಪದಾರ್ಥಗಳು ಮಾರುಕಟ್ಟೆಯನ್ನು ತಲುಪಲು ಹಾದಿಯಲ್ಲಿಯೇ ಕೊಳೆತು ರೈತರಿಗೆ ನಷ್ಟವನ್ನುಂಟುಮಾಡುತ್ತವೆ. ಕಿರಿದಾಗುತ್ತಿರುವ ಇಂದಿನ ವಿಶ್ವದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ದೂರದೇಶದ ಹಣ್ಣು, ತರಕಾರಿ, ಹಾಲು, ಮೀನುಗಳನ್ನು ಸಾಗಿಸಲು ಇರುವ ಸಮಸ್ಯೆಯನ್ನು ಆ ವಸ್ತು ಕೆಡದಂತೆ ಬಹುಕಾಲ ತಾಳಿಕೆ ಗುಣಗಳನ್ನು ಬೆಳೆಯಲ್ಲಿಯೇ ಸೇರಿಸುವ ಪ್ರಯತ್ನ ನಡೆಯುತ್ತಲಿದೆ. ಮಾರುಕಟ್ಟೆಯಲ್ಲಿಯ ಬೇಡಿಕೆಯನ್ನು ಗಮನಿಸಿ ಹಣ್ಣಾಗಿಸಲು ಇಥಲೀನ್‌ನಂತಹ ಅನಿಲವನ್ನು ಹಾಯಿಸಿ (ಹೂವಿನ ಕಾಯಿ, ಬಾಳೆಕಾಯಿ, ಕಿತ್ತಳೆ) ಕೆಲವು ಬಲಿತ/ ಬಲಿಯದ ಕಾಯಿಗಳನ್ನು ಹಣ್ಣುಮಾಡಲಾಗುತ್ತದೆ. ಇದರ ಪರಿಣಾಮವಾಗಿ ಸಂಪೂರ್ಣ ರುಚಿಯನ್ನು ಬದಲಿಸುವ ಕಾಯಿಗಳು ನೀಡವು. ಈ ಹಣ್ಣುಗಳ ತಳಿಯನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಲು ವಂಶಾಣುಗಳನ್ನು ಬಳಿಸಿ ಸುದೀರ್ಘಕಾಲ ಇಡಬಹುದು. ಕೊಳೆಯದ ಟೊಮ್ಯಾಟೋ ತಳಿಯನ್ನು ಈಗಾಗಲೇ ಅಮೇರಿಕೆಯ “ಪ್ಲಾದ್ರ್ ಸಾದ್ರ್” ಜೈವಿಕ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಟೊಮ್ಯಾಟೋ ಇತರ ತಳಿಗಳಿಗಿಂತ ಹೆಚ್ಚು ತಾಳಿಕೆ ಮತ್ತು ರುಚಿಯನ್ನು ನಿಧಾನಗೊಳಿಸುತ್ತವೆ. ಯುರೋಪಿನ ಮಾರುಕಟ್ಟೆಯಲ್ಲಿ ಸಾಸ್, ಜಾಮ್ ಜೆಲ್ಲಿ ಮತ್ತು ಕೆಚಪ್‌ಗಳು ಅಟ್ಲಾಂಟಿಕ್ ಸಾಗರವನ್ನು ದಾಟಿ ನೀಡುತ್ತವೆ. ಎಣ್ಣೆಯಲ್ಲಿ ಕರಿದ ‘ಆಲೂ ಚಿಪ್ಸ್‌’ಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಇವುಗಳನ್ನು ಬಹುಕಾಲ ಕೆಡದಂತೆ ಇಡಬಹುದು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...