(Dialyser!)
ನಮ್ಮ ದೇಹದಲ್ಲಿರುವ ಕೋಶಗಳಲ್ಲಿ ಪ್ರತಿದಿನವೂ ರಕ್ತ ಅಶುದ್ಧಿಯಾಗುತ್ತಲೇ ಇರುತ್ತದೆ. ಏಕಂದರೆ ನಮ್ಮ ದೇಹದ ಕೋಶಗಳಲ್ಲಿ ಮಲೀನ ಪದಾರ್ಥಗಳು ಪ್ರತಿದಿನ ಉತ್ಪತ್ತಿಯಾಗುತ್ತಲೇ ಇರುತ್ತವೆ. ನಮ್ಮ ಮೂತ್ರ ಪಿಂಡಗಳು ಇಂತಹ ಮಲಿನರಕ್ತವನ್ನು ಶುದ್ಧೀಕರಿಸುತ್ತ ಚಲನಶೀಲಗೊಂಡಿರುತ್ತವೆ. ಮುಷ್ಟಿ ಗಾತ್ರದಲ್ಲಿರುವ ಮೂತ್ರ ಪಿಂಡಗಳಲ್ಲಿ ರಕ್ತವು ಹಾಯ್ದು ಹೋಗುತ್ತದೆ. ಮತ್ತು ಅಲ್ಲಿ ರಕ್ತ ಶುದ್ಧಿಗೊಂಡು ದೇಹದಲ್ಲಿ ಪ್ರವಹಿಸುತ್ತಾ ಹೋಗುತ್ತದೆ. ಅಶುದ್ಧ ಅಥವಾ ಮಲಿನ ಪದಾರ್ಥಗಳನ್ನು ಮೂತ್ರಪಿಂಡವು ಮೂತ್ರದ ಮೂಲಕ ಹೊರಗೆಡುತ್ತದೆ. ಈ ಕಾರ್ಯಕ್ಕೆ ‘ಡೈಯಾಲೈಸರ್’ ಎಂದು ಕರೆಯುತ್ತಾರೆ. ಯಾವುದೋ ಕಾರಣದಿಂದ ಈ ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡದಿದ್ದಾಗ ದೇಹದಲ್ಲಿರುವ ಮಲಿನ ಪದಾರ್ಥಗಳು ರಕ್ತದಲ್ಲಿಯೇ ಸಂಗ್ರಹವಾಗಿ ರಕ್ತವು ವಿಷವಾಗಿ ಸಾವು ಸಂಭವಿಸಬಹುದು.
ಇಂಥಹ ಅಪಾಯಕಾರಿ ಸನ್ನಿವೇಶದಲ್ಲಿ ವಿಜ್ಞಾನವು ಒಂದು ಪ್ರಗತಿದಾಯಕ ಯಂತ್ರವನ್ನು ಕಂಡುಹಿಡಿದಿದೆ. ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸದಿದ್ದಾಗ ಆ ಕಾರ್ಯವನ್ನು ಈ ಯಂತ್ರವೇ ನೆರವೇರಿಸುತ್ತದೆ, ಇದರ ಹೆಸರು ಡೈಯಾಲೈಸರ್. ರಕ್ತನಾಳದಿಂದ ರಕ್ತವು ಈ ಉಪಕರಣಕ್ಕೆ ಬರುವಂತೆ ಮಾಡಿ ರಕ್ತವನ್ನು ಪರಿಶುದ್ದಗೊಳಿಸಿ ಅದನ್ನು ಅಭಿದಮನಿಗೆ (Vein) ರವಾನಿಸಲಾಗುವುದು. ಈ ಯಂತ್ರ ಮೂತ್ರ ಪಿಂಡದಿಂದ ಕಾರ್ಯ ಮಾಡಿದರೂ ಮೂತ್ರ ಪಿಂಡಕ್ಕೆ ಸಾಟಿಯಾಗಲಾರದು. ಆದರೂ ನೋವಿನಿಂದ ಬಳಲುತ್ತಿರುವ ರೋಗಿಗೆ ತಾತ್ಕಾಲಿಕ ಪರಿಹಾರ ಒದಗಿಸಿ ಅವನ ಸಾವನ್ನು ಮುಂದೂಡುತ್ತದೆ. ಇಂಥಹ ರೋಗಿಗೆ ಪ್ರತಿವಾರ ಎರಡು ಸಲವಾದರೂ ಡಯಾಲಿಸಿಸ್ ಅಗತ್ಯವಾಗಿದೆ.
*****