ನಾವು ದಿನನಿತ್ಯದಲ್ಲಿ ಸಕ್ಕರೆ ಕಾಯಿಲೆ ಉಳ್ಳವರ ಸ್ಥಿತಿಯನ್ನು ನೋಡಿ ‘ಅಯ್ಯೋಪಾಪ’ ಎನ್ನುತ್ತೇವೆ. ಹೋಳಿಗೆ ತಿನ್ನುವಂತಿಲ್ಲ. ಸಿಹಿಪದಾರ್ಥಗಳನ್ನು ತಿನ್ನುವಂತಿಲ್ಲ. ಸಕ್ಕರೆರಹಿತ ಟೀ ಕಾಫಿಯನ್ನು ಗುಟುಕರಿಸುತ್ತ ಸಿಹಿಯನ್ನೇ ಉಪಯೋಗಿಸದ ಜನರಿದ್ದಾರೆ. ಮುಂದೊಂದು ದಿನ ಸಕ್ಕರೆ ಕಾಯಿಲೆ ಬರಬಾರದೆಂಬ ಭೀತಿಯಿಂದ ಮೊದಲೆ ಸಿಹಿಯನ್ನು ವರ್ಜಿಸುವರೂ ಇದ್ದಾರೆ. ಇದೊಂದು ತರಹ ನಿಸಾರ ಜೀವನ. ಈ ಕಾಯಿಲೆಗೆ ಕಹಿಯಾದ ಹಾಗಲಕಾಯಿ ಪಲ್ಯ, ಗೊಜ್ಜನ್ನೂ ಪ್ರತಿದಿನ ಬಳೆಸಿದರೆ ಈ ಕಾಯಿಲೆಗುಣ ಮುಖವಾಗುವುದೆಂದು ಕ್ರಿ.ಶ. ೬೫೦ ರಲ್ಲಿಯೇ ಪುರಾತನ ವೈದ್ಯ ಶುಶ್ರೂತ ಹೇಳಿದ್ದರು. ಆದರೆ ವರ್ಷಕ್ಕೆ ಒಂದೋ ಎರಡೋ ಬಾರಿ ಹಾಗಲ ಕಾಯಿಯನ್ನು ಉಪಯೋಗಿಸುವುದೇ ದುಸ್ತರ. ಕಹಿ ಕಹಿ. ವರ್ಷವಿಡೀ ದಿನದ ಪ್ರತಿ ಊಟ, ತಿಂಡಿಯಲ್ಲಿ ಹಾಗಲಕಾಯಿಯನ್ನು ಬಳೆಸಲು ಸುತಾರಾಂ ಸಾಧ್ಯವಿಲ್ಲ.
ಯುರೋಪಿನ ಸೊಜಿವಿಟ್ S.L..ಕಂಪನಿಯ ಆಹಾರ ತಜ್ಞರು ಹಾಗಲಕಾಯಿಯಲ್ಲಿ ಯಾವ ಔಷಧಿಗಳು ರಕ್ತದಲ್ಲಿನ ಮಿತಿಮೀರಿದ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ಬಗ್ಗೆ ತೀವ್ರ ಸಂಶೋಧನೆ ನಡೆಯಿಸಿ ಕಡೆಗೆ “ಪಾಲಿಪೆಪ್ಟೈಡ್ಸ್”ಗಳನ್ನು ಪೌಡರ್ ಮಾಡಿ ಕಾಪ್ಯೂಲ್ಸ್ (ಗುಳಿಗೆಗಳು) ಗಳನ್ನು ಹೊರತಂದರು. ಇಂಥಹ ಗುಳಿಗೆಗಳನ್ನು ಮಧುಮೇಹಿಗಳು ಯಾವ ಕಹಿ ಇಲ್ಲದೇ ಮುಖ ಕಿವಿಚಿಕೊಳ್ಳದೇ ಈ ಮಾತ್ರೆಗಳನ್ನು ನುಂಗಿ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಈ ಮಾತ್ರೆಗಳಲ್ಲಿ ಹಾಗಲಕಾಯಿ ಜೀವಸತ್ವ ಅಂತರ್ಗತವಾಗಿರುತ್ತದೆ. ಈ ಔಷಧಿಯ ಅಂಶಗಳು ನಮ್ಮ ದೇಹದಲ್ಲಿ Insulin ಉತ್ಪತ್ತಿ ಹೆಚ್ಚಿಸುವುದಲ್ಲದೇ ದೇಹದ ಪ್ರತಿಯೊಂದು ಜೀವಕೋಶಗಳಲ್ಲಿ ಗ್ಲೂಕೋಸ್ Metabolisms ಕ್ರಿಯೆಯನ್ನು ಹೆಚ್ಚಿಸುತ್ತವೆ. ಇನ್ನೊಂದು ಔಷಧಿ ಎಂದರೆ “ಮಧುನಾಶಿನಿ” ಎಲೆಯಲ್ಲಿನ ಔಷಧೀಯ ಅಂಶ. ನಾಲಿಗೆ ಹಾಗೂ ಕರುಳಗಳ ಗ್ಲೂಕೋಸ್ Receptor ಗಳನ್ನೂ ತಡೆ ಹಿಡಿದು ತದನಂತರ ಆಹಾರದಲ್ಲಿನ ಗ್ಲೂಕೋಸನ್ನು ದೇಹಕ್ಕೆ ಸೇರದಂತೆ ಮಾಡಿ ರಕ್ತದ ಗ್ಲೂಕೊಸ್ ಮಟ್ಟವು ನಿಯಂತ್ರಿಸುವುದು. ಈ ಔಷಧಿಯೂ ಕೂಡ ಕ್ಯಾಪ್ಸೂಲ್‌ರೂಪದಲ್ಲಿ Sweet A way ಹೆಸರಿನಲ್ಲಿ ದೊರೆಯುತ್ತದೆ.
ಮೇಲಿನ ಎರಡು ತರದ ಮಾತ್ರೆಗಳು ಭಾರತದಲ್ಲಿ ಸಿಗುತ್ತದೆ. ಸಕ್ಕರೆ ಕಾಯಿಲೆಯನ್ನು ಆರಂಭದಲ್ಲಿಯೇ ಮುಂದೂಡಲು, ನಿಯಂತ್ರಿಸಲು ಒಳ್ಳೆಯ ಅವಕಾಶಕ್ಕಾಗಿ ಈ ಮಾತ್ರೆಗಳನ್ನು ಬಳಸಿದರೆ ದಿವ್ಯೌಷಧವಾಗಿ ಕಾಯಿಲೆ ಗುಣವಾಗುತ್ತದೆ.
*****