ಈ ಕನ್ನಡ ನೆಲದಿ ಜನಿಸಿ
ನಾನಾದೆನು ನಿಜದಿ ಧನ್ಯ|
ಈ ಕೃಷ್ಣಕಾವೇರಿ ನದಿಯಲಿ ಮಿಂದು
ನನಗಾಯಿತು ಮಹಾಪುಣ್ಯ|
ಕನ್ನಡ ಹಾಡಾಯಿತು
ನನಗದುವೆ ದಿವ್ಯಮಂತ್ರ
ಈ ಕನ್ನಡ ಬಾವುಟ ಹಿಡಿದ
ನನ್ನ ಕೈಯಾಯಿತು ಚಿನ್ನ||
ಇಲ್ಲಿರುವ ಪ್ರಕೃತಿಸೌಂದರ್ಯ್ಯ
ಇಲ್ಲಿ ಬೆಳೆಯುವ ಶ್ರೀಗಂಧವ
ಇನ್ನೆಲ್ಲಿ ಕಾಣಸಿಗಲಿ ನಾ|
ಇಲ್ಲರಿಯುವ ನದಿನೀರ ಸಿಹಿಯ
ಇನ್ನೆಲ್ಲಿ ಸವಿಯಲಿ ನಾ|
ಇಲ್ಲಿರುವ ಜನರ ಸರಳತೆ ಮುಗ್ಧತೆಯ
ಇನ್ನೆಲ್ಲಿ ನೋಡಬಯಸಲಿ ನಾ||
ಇಲ್ಲಿರುವ ಉಡುಪಿ ವೈಕುಂಠ ದ್ವಾರವ
ಗೋಕರ್ಣ ಭೂಕೈಲಾಸ ಲಿಂಗವ
ಇನ್ನೆಲ್ಲಿ ಸ್ಪರ್ಶಿಸಲಿ ನಾ|
ಇಲ್ಲಿ ನೆಲೆಸಿರುವ ನವದುರ್ಗೆಯರ ಶಕ್ತಿಯ
ಇನ್ನೆಲ್ಲಿ ದರ್ಶಿಸಲಿ ನಾ|
ಹಾವು ಕಪ್ಪೆಗೆ ಆಶ್ರಯ ನೀಡಿ
ರಕ್ಷಣೆ ಮಾಡಿರುವ ಶೃಂಗೇರಿ
ಶಾರದಾ ಸನ್ನಿಧಿಯ ಇನ್ನೆಲ್ಲಿ ಕಾಣಲಿ ನಾ||
*****