ಸಾಮಾನ್ಯವಾಗಿ ನಾವು ಮೇಕೆ, ಹೋತ, ಟಗರು, ಹಸು, ಹೋರಿ, ಜಿಂಕೆ, ಎತ್ತು, ಎಮ್ಮೆ ಮುಂತಾದ ಕೊಂಬುಗಳ್ಳುಳ್ಳ ಪ್ರಾಣಿಗಳನ್ನು ಸಾಕುತ್ತೇವೆ. ಕೆಲವು ಪ್ರಾಣಿಗಳ ಕೊಂಬುಗಳು ಪ್ರಾಣಾಂತಿಕ ಭಯವನ್ನು ಸೃಷ್ಟಿಸಿದರೆ, ಕೆಲವು ವ್ಯಕ್ತಿಗಳಿಗೆ ಇರಿದು ಅಪಾಯವನ್ನುಂಟು ಮಾಡುತ್ತವೆ. ಕೆಲವಂತೂ ಸಾಯಿಸಿಯೇ ಬಿಡುತ್ತವೆ. ಕೊಂಬುಳ್ಳ (ಭೀಕರವಾದ ) ಪ್ರಾಣಿಗಳಂದರೆ ಹಾಯಬಹುದೆಂಬ ಭಯ ಎಲ್ಲರಿಗೂ ಇದ್ದೆ ಇರುತ್ತದೆ. ಸಾಕಲೇಬೇಕೆಂಬ ಅನಿವಾರ್ಯತೆ ಕೂಡ ಇರುತ್ತದೆ.
ಕೊಂಬಿಲ್ಲದೇ ಹುಟ್ಟಬಹುದಾದ ಪ್ರಾಣಿಗಳಿದ್ದರೆ ಹೇಗೆ ಈ ಬಗೆಗೆ ವಿಜ್ಞಾನಿಗಳು ಚಿಂತನೆ ನಡೆಯಿಸಿ ಕೊನೆಗೂ ಯಶಸ್ವಿಯಾಗಿದ್ದಾರೆ. ಈಗ ತಳಿ ತಂತ್ರಜ್ಞಾನದಿಂದಾಗಿ ಕೊಂಬಿಲ್ಲದ ಹಸುಗಳನ್ನು ತಮಗಿಷ್ಟವಾದ ಬಣ್ಣದಲ್ಲಿ ಹೊಂದಲು ಸಾಧ್ಯವಿದೆ, ಎಂದು ಖಚಿತಪಡಿಸಲಾಗಿದೆ. ಮೈಕ್ರೋಸೆಟೆಲೈಟ್ ಎನ್ನುವ ಡಿ. ಎನ್. ಎ. ಈ ಕೊಂಬಿನ ಬೆಳವಣಿಗೆಗೆ ಕಾರಣವೆಂದು ತಿಳಿದಾಗಿದೆ. ಈ ಡಿ.ಎನ್.ಎ. ಅನ್ನು ಕಟ್ಟಿಹಾಕಲು ಕೃತಕ ತಳಿಯಾಂತಕನನ್ನು (ಜೆನಿಟಕ್ ಮಾರ್ಕರ್‍ಸ್) ತಯಾರಿಸಿ ನೀಡಲಾಗುತ್ತದೆ. ಕೊಂಬಿಲ್ಲದ ಕೆಲವು ಜಾತಿಯ ಪ್ರಾಣಿಗಳಲ್ಲಿ ಕಾಣಬಂದ ವಿದ್ಯಾಮಾನವನ್ನು ಬಳಕೆಗೆ ಅಷ್ಟೇ ತರಲಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಹೀಗೆ ಕೆಲವು ಜೀವಿಗಳಲ್ಲಿರುವ ಅಂಗಾಂಗಗಳ ಮೂಲ ಜೆನಿಟಕ್ಸ್‌ನ್ನು ಕಂಡು ಹಿಡಿದು ಅದು ಪೂರೈಸದಂತೆ ಮಾಡಿ ಬೇಡವಾದ ಅಂಗಾಂಗಗಳನ್ನು ಬೆಳೆಯದಂತೆ ಮುಂದೆ ಮಾಡಬಹುದೇನೊ? ಕಾಲಾಯತಸ್ಮೈನಮಃ
*****