ಇದುವರೆಗೆ ಯಾವುದೇ ನಿವೇಶನವೂ ಭೂಮಿಯ ಮೇಲೆ ಇರುತ್ತದೆಂಬುವುದು ವಾಸ್ತವ. ಇತ್ತೀಚೆಗೆ ಈ ಭೂಮಿಯ (ನೆಲದ) ಮೇಲೆ ಸ್ಥಳಾವಕಾಶವಿಲ್ಲವೆಂದೂ, ಇನ್ನೂ ಅನೇಕ ಕಾರಣಗಳಿಂದಾಗಿ ಈ ಮಾನವ ವಿಜ್ಞಾನದ ಸಹಾಯದಿಂದ ಭೂಗರ್ಭಕ್ಕೆ ಲಗ್ಗೆ ಇಡುತ್ತಿದ್ದಾನೆ. ಜಪಾನ್ ದೇಶ ಈ ನೆಲದಾಳಿನ ವಾಸದ ಸಾಹಸಕ್ಕೆ ಕೈ ಹಾಕಿದೆ. ಪದೆ ಪದೇ ಭೂಕಂಪನದಿಂದ ಬೇಸತ್ತ ಜಪಾನಿಯರು ನೆಲದಾಳದಲ್ಲಿ ಭೂಕಂಪನ ಮುಕ್ತವಾದ ನಗರಗಳ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಚಿನ್ನದ, ಕಲ್ಲಿದ್ದಿಲಿನ ಗಣಿಗಳಂತೆ ಕಾಣುವ ಈ ನಗರಗಳು ಭೂಮಿಯ ಮೇಲ್ಮೈಯಿಂದ ೫೦ ಮೀಟರ್ ಆಳದಲ್ಲಿ ೧೦೦ ಕಿ.ಮೀ. ವಿಸ್ತಾರದಲ್ಲಿ ಹೊಸ ನಗರಗಳ ರಚನೆ ಯಾಗಲಿವೆ. ನಗರದಾದ್ಯಾಂತ ಓಡಾಡುವ ಅತಿವೇಗದ ನೆಲದಾಳದಿಂದ ಭೂಮಿಯ ಮೇಲಕ್ಕೆ ವೇಗವಾಗಿ ಪಯಣಿಸುವ ಸಾರಿಗೆ ಈ ಭೂಗರ್ಭ ನಗರಗಳನ್ನು ಸಂಪರ್ಕಿಸುತ್ತದೆ.
ಸೂರ್ಯನ ಬೆಳಕನ್ನು ಪ್ರತಿಫಲಿಸಿ ನೆಲದಾಳದಲ್ಲಿ ಹಿತವಾದ ಸೂರ್ಯನ ಬೆಳಕನ್ನು ಪಡೆಯುವ ಮತ್ತು ಸಂಪೂರ್ಣ ನಗರವೇ ಹವಾನಿಯಂತ್ರಿತ ಮಾಡಲಾಗಿದೆ. ನಗರದಲ್ಲಿ ಕೃತಕ ತಂತ್ರಗಳನ್ನು ಬಳಸಿ ನೆಲದ ಮೇಲಿರುವಂತೆ ವಾತಾವರಣವನ್ನು ಸೃಷ್ಟಿಸುವ ಸೋಜಿಗದ ಪಟ್ಟಣಗಳು ಇವಾಗಲಿವೆ.
ಇಂದು ಕೂಡ ಬಹಳ ಜನ ಕೇವಲ ಪುರಾಣಕಾಲದ ಕಲ್ಪನೆ, ಎಂದು ಹೇಳುತ್ತಿರುವಾಗ ಇದು ಕೂಡ ಒಂದು ರೀತಿಯ ‘ಪಾತಾಳಲೋಕ’ ವೆಂದರೆ ಒಂದು ರೀತಿಯಲ್ಲಿ ತಪ್ಪಿಲ್ಲ.
*****