ಕಳೆದ ದಶಕದ ಕೊನೆಯಲ್ಲಿ ಬೆಂಗಳೂರಿದ ಜನಸಂಖ್ಯೆ ೪೭ ಲಕ್ಷ ವಿತ್ತು, ಕೇವಲ ೧೦ ವರ್ಷಗಳ ಅವಧಿಯಲ್ಲಿ ೮೦ ಲಕ್ಷವನ್ನು ಮೀರಿದೆ. ಇದು ಬೆಂಗಳೂರಿನಂತಹ ಒಂದು ನಗರದ ಕಥೆಯಲ್ಲ ಏಷಿಯಾ, ಲ್ಯಾಟಿನ, ಆಫ್ರಿಕಾ, ಅಮೇರಿಕಾದಂತಹ ನಗರಗಳಲ್ಲಿಯೂ ಕೂಡ ಜನಸಂಖ್ಯೆಯ ಸ್ಫೋಟ ದಿನೇ ದಿನೇ ಆಗುತ್ತಲೇ ಇದೆ. ಅಭಿವೃದ್ಧಿಯ ಅಗ್ರಪಂಕ್ತಿಯಲ್ಲಿರುವ ಜಪಾನ್ ದೇಶದ ಟೋಕಿಯೋ ಅಮೇರಿಕೆಯ ಪ್ರಮುಖ ನಗರ ನ್ಯೂಯಾರ್ಕ, ಜರ್ಮನಿಯ, ಬರ್ಲಿನ್, ಫ್ರಾನ್ಸಿನ ಪ್ಯಾರಿಸ್ ಜನಸಂಖ್ಯೆಯ ಸ್ಫೋಟದಿಂದ ನಾಗರೀಕರು ತಲ್ಲಣಗೊಳ್ಳುತ್ತಿದ್ದಾರೆ.
ಮುಂದಿನ ಶತಮಾನದಲ್ಲಿ ಭೂಮಿಯ ಮೇಲಿನ ಜನಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವುದು ನಿಶ್ಚಿತ. ನಾಗರೀಕತೆಯ ವಿಕಾಸದ ತುತ್ತತುದಿಯನ್ನು ತಲುಪಿರುವ ಮಾನವ ಸಂಖ್ಯೆ ೨೦೫೦ರ ವೇಳೆಗೆ ೧,೦೦೦ ಕೋಟಿ (೧೦ ಬಿಲಿಯನ್) ಯನ್ನು ದಾಟಲಿದೆ. ಜಪಾನಿನಲ್ಲಿ ನೆಲದ ಮೇಲೆ ವಾಸ ಮಾಡಲಿಕ್ಕೆ ಸ್ಥಳವೇ ಸಿಗಲಾರದು. ಈಗಾಗಲೇ ಪ್ರತಿ ಕಿ.ಮೀ. ಗಳಿಗೆ ೮,೬೦೦ ಜನಸಂದಣಿ ಇದೆ. ೭ ಕೋಟಿ ಜನಸಂಖ್ಯೆಯ ಸಂದಣಿಯನ್ನು ಭರಿಸಲಾರದೇ ಜಪಾನಿನ ನಗರಗಳು ತುಳುಕುತ್ತಿವೆ. ನೆಲದ ಮೇಲೆ ಸ್ಥಳವಿಲ್ಲದೇ ನೆಲಕ್ಕಾಗಿ (ಕಾಲೂರಲು) ಹುಡುಕಾಟ ನಡೆಯುತ್ತಲಿದೆ. ಈಗಿರುವ ದಾರಿ ಎಂದರೆ ನೆಲದಾಳದಲ್ಲಿಯೋ ಸಮುದ್ರ ಮಧ್ಯೆ ಅಥವಾ ಸಮುದ್ರ ತೀರಗಳಲ್ಲೋ ಅಥವಾ ಅಂತರೀಕ್ಷದಲ್ಲಿಯೇ ನಗರಗಳನ್ನು ನಿರ್ಮಾಣ ಮಾಡಿಯೇ ಜೀವಿಸುವ ಸಂದರ್ಭ ಬಂದಿದೆ.
ಕ್ರಿ.ಶ. ೨೦೫೦ ರವೇಳೆಗೆ ಚಂದ್ರಗ್ರಹದ ಮೇಲೆ ಜನವಸತಿಯ ವಸಾಹತು ಆರಂಭವಾಗಲಿದೆಯಂತೆ. ಈ ನವನಗರಗಳ ನಿರ್ಮಾಣಗಳಿಂದ ನಗರ ಜೀವನ ಸಮಸ್ಯೆಗಳಿಲ್ಲದೆ ಸಾಧ್ಯವೇ ಎಂಬ ಪ್ರಶ್ನೆ. ಮುಂದಾದರೂ ವಿಜ್ಞಾನದಲ್ಲಿ ಹೊಸದನ್ನು ಸಾಧಿಸುತ್ತಲೇ ಇರುವ ಸಂಶೋಧಕರು ಎಲ್ಲಡೆಯಲ್ಲೂ ಜನರನ್ನು ಭರ್ತಿಮಾಡಬಹುದೆನ್ನುತ್ತಾರೆ.
*****