ಸೂರ್ಯನಿಂದ ಭಾರಿ ಬಿಸಿಯಾದ ಮತ್ತು ವಿದ್ಯುತ್ ಆವೇಷದ ಅನಿಲವು ಹೊರ ಹೊಮ್ಮುತ್ತಿರುವುದು ಇತ್ತೀಚೆಗೆ ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಐರೋಪ್ಯ ಬಾಹ್ಯಕಾಶ ಸಂಸ್ಥೆ SOHO (Solar and Heliospheric Observatory) ಎಂಬ ಉಪಗ್ರಹವು ಇದನ್ನು ಪತ್ತೆ ಮಾಡಿದೆ. ಅಂತರೀಕ್ಷದಲ್ಲಿ ಸೂರ್ಯನಿಂದ ಹೊರಬೀಳುವ ಈ ವಿಕಿರಣಗಳನ್ನು ಸೋಹೊ ಸಂಸ್ಥೆ ಅಳತೆ ಮಾಡಿದೆ.
ಸೂರ್ಯನ ಬೆಂಕಿ ಉಗುಳುವಿಕೆಯನ್ನು M.I.4 ಎಂದು ಕರೆಯಲಾಗಿದೆ. (Geostationary Operational Environmental Satellite) ಎಂಬ ಉಪಗ್ರಹವೂ ಈ ವಿದ್ಯಾಮಾನವನ್ನು ದಾಖಲಿಸುತ್ತದೆ. ಇಲ್ಲಿನ ಕ್ಷ-ಕಿರಣ ಪರೀಕ್ಷಕಗಳು ಸೌರ ವಿಕಿರಣಗಳ ತಾಪವನ್ನು ಅಳೆದಿದೆ. ಸೂರ್ಯನಲ್ಲಿ ೨೨ ವರ್ಷಗಳಿಗೊಮ್ಮೆ ಬೆಂಕಿ ಉಗುಳುವಿಕೆಯ ನಿರಂತರ ಚಲನೆ ಚಕ್ರ ನಡೆಯುತ್ತದೆ. ಈ ಬೆಂಕಿ ಕಾರುವಿಕೆಯನ್ನು B.E.M.X ಎಂದು ವರ್ಗೀಕರಣ ಮಾಡಲಾಗಿದೆ. M ವರ್ಗದಲ್ಲಿ ರೇಡಿಯೋ ತರಂಗಗಳು ಹೊರಬೀಳುತ್ತವೆ. X ವರ್ಗರೇಡಿಯೋ ತರಂಗಗಳು ವಿದ್ಯುತ್ ಜಾರಿದ ಮೇಲೂ ಪರಿಣಾಮ ಬೀರುತ್ತವೆ. ಇವುಗಳಿಂದಾಗಿ ಉಪಗ್ರಹಗಳ ವಿದ್ಯುತ್ ಮಂಡಲಗಳು ಘಾಸಿಗೊಂಡಿವೆ ಎಂದು ಹೇಳಲಾಗುತ್ತವೆ. ಸೋಹೋ’ನಲ್ಲಿ ದಾಖಲಾದ ಈ ವಿಕರಣಗಳು ಉನ್ನತ ಶಕ್ತಿಯ ಪ್ರೋಟಾನ್ ಕಣಗಳು ಎಂದು ಗೊತ್ತಾಗಿದೆ.
*****