ದಿನನಿತ್ಯ ಸೇವಿಸುವ ಪಾನಿಯಗಳಲ್ಲಿ ವಿಟ್ಯಾಮಿನ್‌ಗಳು ಸಮೃದ್ಧವಾಗಿ ಸಿಗುತ್ತವೆ ಎಂದರೆ ಬೇಡವೆನ್ನುವರಾರು? ಕೋಟ್ಯಾಂತರ ಜನರಿಗೆ ಅಗತ್ಯವಿರುವ ಪೌಷ್ಟಿಕತೆಯನ್ನು ಒದಗಿಸುವ ಅತ್ಯಾಧುನಿಕ ತಾಂತ್ರಿಕ ಶೋಧನೆಯೊಂದು ಈ ರೀತಿ ‘ಚಹಾಪೇಯ’ವನ್ನು ತಯಾರಿಸುತ್ತಲಿದೆ.
ದೇಶದ ಅತಿದೊಡ್ಡ ಪ್ಯಾಕೆಟ್ ಟೀ ಕಂಪನಿ ಹಿಂದುಸ್ಥಾನ್ ಲಿವರ್ ಲಿಮಿಟೆಡ್ (H.L.L.) ಇದೀಗ ವಿಟಮಿನ್ ಎ, ಬಿ2 ಮತ್ತು ನಿಯಾಸಿನ್‌ಗಳನ್ನು ಸೇರಿಸಿ ಸಮೃಧಿಗೊಳಿಸಿದ (ಫೋರ್ಟಿಫೈಡ್) ಬ್ರೂಕ್‌ಬಾಂಡ್, ಎ1, ಪವರ್ ಎಂಬ ವಿಟಮಿನ್ ಭರಿತ ಟೀಯನ್ನು ಭಾರತಕ್ಕೆ ಪರಿಚಯಿಸಿದೆ.
ಈ ಟೀ ಅಪಾರವಾದ ನೈಸರ್ಗಿಕ ಆರೋಗ್ಯವನ್ನು ಹೊಂದಿದ್ದು ಬೇರೆ ಯಾವುದೇ ರುಚಿಯನ್ನೂ ನೀಡದೇ ಸಹಜವಾದ ರುಚಿಯನ್ನು ಹೊಂದಿದೆ. ಬ್ರೂಕ್‌ಬಾಂಡ್ ಎ1 ಪವರ್ ಟೀಯನ್ನು ದಿನಕ್ಕೆ ಐದು ಕಪ್ಪನ್ನು ಕುಡಿದರೆ ಶೇ. ೫೦ ರಷ್ಟು ವಿಟ್ಯಾಮಿನ್ ದೊರೆಯುತ್ತದೆ. ಭಾರತದ ಜನಸಂಖ್ಯೆಯಲ್ಲಿ ಶೇ.೫೦ ಕ್ಕೂ ಹೆಚ್ಚು ಜನರಲ್ಲಿ ವಿಟಾಮಿನ್ ಕೊರತೆ ಎದ್ದು ಕಾಣುತ್ತದೆ. ಪ್ರಾಯಶಃ ೧೦ ಜನ ಭಾರತೀಯರಲ್ಲಿ ಕನಿಷ್ಟ ೮ ಜನರಾದರೂ ಟೀ ಕುಡಿಯುವದರಿಂದ ಇವರಿಗೆ ಪೌಷ್ಟಿಕತೆ ಒದಗಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ ಈ ಪಾನಿಯವನ್ನು ಸಮೃದ್ಧಗೊಳಿಸುವುದಾಗಿದೆ. ಯಾವುದೇ ಮಾಲ್ವೆಡ್ ಪಾನೀಯದ ಒಂದು ಬಟ್ಟಲಿಗೆ ೬ ರೂ. ಆದರೆ ಎ1 ಪವರ್ ಟೀ ಬೆಲೆ ಸು.M 1.30 ರೂ. ಆಗಿರುವುದರಿಂದ ಎಲ್ಲರ ಕೈಗೆ ಎಟಕುತ್ತದೆ.
ಹಿಂದೂಸ್ಥಾನ್ ಲಿವರ್ ಸಂಶೋಧನಾ ಮತ್ತು ಪ್ರಗತಿಪರ ಕಾರ್ಯವಿಧಾನಗಳ ನಂತರ ಕರ್ನಾಟಕದಲಿ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಮತು ಪೌಷ್ಟಿಕತೆ (ಹೆಲ್ತ್ ಅಂಡ್ ನ್ಯೂಟ್ರಿನ್)ಯ ಕ್ಷೇತ್ರದಲ್ಲಿ ಸ್ವತಂತ್ರ ಸಂಸ್ಥೆಯಾಗಿರುವ ನ್ಯೂಟ್ರಿಷನ್ ಸಿಂಡಿಕೇಟ್ ಈ ಟೀ ಬ್ರಾಂಡನ್ನು ದೃಢೀಕರಿಸಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಡಾ|| ಕಲ್ಯಾಣ ಬಾಗ್ಯಿಯವರು ಎ1 ಪವರ್ ಪರೀಕ್ಷೆಗೆ ಒಳಪಡಿಸಿದ ವರದಿಗಳನ್ನು ನೋಡಿ ಎ1 ಪವರ್‌ನ ೫ ಬಟ್ಟಲುಗಳು ದಿನಕ್ಕೆ ಅಗತ್ಯವಿರುವ ವಿಟಾಮಿನ್‌ಗಳಲ್ಲಿ ಶೇ. ೫೦ ರಷ್ಟು ಪೂರೈಸುತ್ತದೆಂದು ಹೇಳುತ್ತಾರೆ. ಭಾರತ ದಂತಹ ಜನನಿಬಿಡ ದೇಶದಲ್ಲಿ ಸೂಕ್ಷ್ಮ ಪೋಷಣೆಯ ಕೊರತೆಯನ್ನು ನೀಗಿಸುವ ಪರಿಹಾರೋಪಾಯವೆಂದರೆ ಸಮೃದ್ಧಗೊಳಿಸಿದ ಆಹಾರಗಳು, ಪಾನಿಯಗಳು ಎನ್ನಬಹುದು. ೧೯೯೫ರಲ್ಲಿಭಾರತವು ಅಂಗೀಕರಿಸಿದ ದಿ ನ್ಯಾಶನಲ್ ನ್ಯೂಟ್ರೀಷನ್ ಪ್ಲಾನ್ ಆಪ್ ಆಯಕ್ಷನ್‌ನಲಿ ಪೌಷ್ಟಿಕತೆಯ ಕೊರತೆ ವಿಶೇಷವಾಗಿ ಸೂಕ್ಷ್ಮಪೌಷ್ಟಿಕತೆಯನ್ನು ನಿರ್ಮೂಲನ ಮಾಡಿ ಪೌಷ್ಟಿಕ ಆಹಾರವನ್ನು ಉತ್ತೇಜಿಸಲು ಆಹಾರಗಳನ್ನು ಸಮೃದ್ಧಿಗೊಳಿಸಬೇಕೆಂದು ಹೇಳಿದೆ.
*****