ಒಂದು ಮುಂಜಾವಿನಲಿ
ಹಸಿರುಟ್ಟ ಭಾವಲತೆಯ
ಸೆರಗಿನಲ್ಲಿ ಮುತ್ತನಿತ್ತ
ಹೂ ನಗೆಯ ಕಂಡೆ ||
ಸೂರ್ಯಕಿರಣ ಅನಂತದಲ್ಲಿ
ಸೃಷ್ಟಿ ಸೊಬಗ
ಹಾಸಿಗೆಯಲ್ಲಿ ಮುತ್ತನಿತ್ತ
ಹೂ ನಗೆಯ ಕಂಡೆ ||
ಹೃದಯ ವೀಣಾತರಂಗದಲ್ಲಿ
ಮಿಡಿವ ಒಲವಿನಾ
ಸ್ಪರ್ಶದಲ್ಲಿ ಮುತ್ತನಿತ್ತ
ಹೂ ನಗೆಯ ಕಂಡೆ ||
ಹುಣ್ಣಿಮೆ ಹಾಲ ಓಕುಳಿಯಲ್ಲಿ
ಜವ್ವನೆ ಚೆಲುವ
ಬಂಧನದಲ್ಲಿ ಮುತ್ತನಿತ್ತ
ಹೂ ನಗೆಯ ಕಂಡೆ ||
ನೋವು ನಲಿವ ಜೋಗುಳದಲ್ಲಿ
ವಾತ್ಸಲ್ಯ ಅನುಬಂಧ
ಪ್ರೀತಿಯಲ್ಲಿ ಮುತ್ತನಿತ್ತ
ಹೂ ನಗೆಯ ಕಂಡೆ ||
*****