ಭಾರತಾಂಬೆಯ ಮಹಿಮೆ

ಭಾರತವನುಳಿಯುತ್ತ ನನಗೆ ಜೀವನವೆತ್ತ?
ಭಾರತವೆ ನನ್ನುಸಿರು, ನನ್ನೊಗೆದ ಬಸಿರು.
ಭಾರತವೆ ಧನಧಾನ್ಯ, ಭಾರತವೆ ಮನೆಮಾನ್ಯ,
ಭಾರತವೆ ದೇವಾರವೆನ್ನ ಸಂಸಾರ.

ಭಾರತದ ನೆಲಹೊಲವು ಸುರಭಿಯಿಳಿಕೆಚ್ಚಲವು,
ಭಾರತದ ತಿಳಿಜಳವು ಸೊದೆಯ ಸವಿ ಸೆಳವು,
ಭಾರತದ ಶ್ಯಾಮಲತೆ ತನುಮನಕ ಕಾಮಲತೆ.
ಭಾರತದ ಪಶುಪಕ್ಷಿ ವೈಚಿತ್ರ್ಯ ಸಾಕ್ಷಿ.

ಭಾರತದ ಸಕ್ಕದವು ಜ್ಞಾನನಿಧಿಯೊಕ್ಕದವು.
ಭಾರತದ ಹಲ ಮಾತೆ ಮೇಳವದ ಗೀತೆ;
ಭಾರತದ ಶುಭ ಚರಿತ ಧರೆಗೆ ಧರ್‍ಮದ ಕರೆತ,
ಭಾರತದ ತೋಳ್ಮಿಗಿಲು ಹಗೆಯ ಬಗೆದಿಗಿಲು.

ಭಾರತೀಯ ಸ್ವತಂತ್ರ ಸಾಧನವೆ ನಿಜಮಂತ್ರ,
ಭಾರತದ ಜಯಮೂರ್‍ತಿ ಮನ್ಮನಃಪೂರ್‍ತಿ,
ಭಾರತದ ಸೋದರಿಕೆ ನನ್ನ ದಿನದಿನದೆರಕ,
ಭಾರತ ಯಶೋಗಾನವೆನ್ನೆದಯ ತಾನ.

ಭಾರತದ ಮಂಗಲವು ಭುವನವಲ್ಲಭನೊಲವು,
ಭಾರತದ ಸಮುಚ್ಛ್ರಯವು ಶಾಂತಿಗಾಶ್ರಯವು;
ಭಾರತದ ಜನಕುಲವು ಭುವಿಯ ಬಳಗಕೆ ಬಲವು,
ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಂತ ನೆಲದಲ್ಲಿ
Next post ಹೃದಯಕ್ಕೆ ಸಂಜೀವನಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…