ತವರೂರ ಹಾದಿಯಲಿ ಹೂವು ಚೆಲ್ಲಿ
ಎನ್ನ ಮನೆಯ ಬೆಳಗುವಲ್ಲಿ
ಹೊನ್ನ ಕುಡಿಯ ತಾರೆಂದು ಒಡಲ
ಮಡಿಲ ತುಂಬಿ ಬಾರೆಂದು ಹೇಳಿ
ಹೋದಿರಿ! ಎನ್ನ ಸಖಾ ನಾನಿಲುವೇನೆ ||
ನಿಮ್ಮ ಮನೆಯ ಬೆಳಗುವ
ದೀಪವೆಂದೂ ಆರದೆ ಉಳಿಸುವೆ
ನಿಮ್ಮದೇ ಭಾವದುಸಿರಲಿ ನಿಮ್ಮ
ಒಲವ ಕಾಯುವೆ ಬರಬಾರದೆ ಸಖ
ಚಂದಿರ ಬೆಳಕು ಚೆಲ್ಲುವ ನಭಕೆ ||
ಬಾಳ ಒಲವಿನ ಪಯಣದಲ್ಲಿ
ಕೈ ಹಿಡಿದು ನಡೆಸಿದಿರಿ
ನೋವು ನಲಿವಲ್ಲಿ ಆಸರೆಯಾದಿರಿ
ಮರೆತು ಬಿಡಲು ನಿಮ್ಮನು
ಗೊಂಬೆಯಾಟ ಅಲ್ಲ ಇದು ತಿಳಿಯಿರಿ ||
ಎನ್ನ ಜೀವನದ ಉಸಿರಾಗಿ
ಮನದಂಗಳದಲ್ಲಿ ಮನೆ ಮಾಡಿದಿರಿ
ಭಾವನೆಗಳ ತೋಳ್ ತೆಕ್ಕೆಯಲಿ
ಬಿಗಿದೆನ್ನ ನಗಿಸಿ ಮನದರಸಿ ನೀ
ಎಂದದ್ದು ನೆನಪಿದೆಯಾ ಸಖ ||
ಉರಿಯುವುದೆ ಎಣ್ಣೆ ಇಲ್ಲದಾ ದೀಪ
ಒಲಿಯುವನೇ ಭಕ್ತಿ ಇಲ್ಲದೆ ದೇವನು
ಬದುಕುವುದೆ ನೀರಿಲ್ಲದೆ ಮೀನು
ನೀವಿಲ್ಲದೆ ಎನಗೆ ಯಾರು ಆಸರೆ
ಎನ್ನ ಮನದಲೀ ತುಂಬಿರುವಿರಿ ನೀವು ||
*****