ಒಂದು ಎರಡು ಮೂರು
ಅಹ ಮೂವತ ಮೂರು
ಎಂಬತು ತೊಂಬತು ನೂರು
ಒಹೊ ಮೂವತ ಮೂರು
ಒಂದು ಎರಡು ಮೂರು
ಗಾಳಿ ಬಂದೆಡೆ ತೂರು
ಏಳು ಸಮುದ್ರವ ಹಾರು
ಖಾಲಿಯಿದ್ದೆಡೆ ಕೂರು
ಅಯ್ಯಾ ಯಾರಿಗೆ ಯಾವುದು ಊರು
ಕೆಟ್ಟು ಪಟ್ಟಣ ಸೇರು
ಒಂದು ಎರಡು ಮೂರು
ಸೇರಿಗೆ ಸವ್ವಾ ಸೇರು
ಕೊಳ್ಳುವರಿದ್ದರೆ ಮಾರು
ಕ್ರಾಂತಿಯೆಂಬ ಪುಕಾರು
ಬಂತೈ ಬಿಳಿಗಿರಿ ರಂಗನ ತೇರು
ಎಲ್ಲರ ಮನೆಗೂ ಚಿನ್ನದ ಸೂರು
ಒಂದು ಎರಡು ಮೂರು
ಗೆದ್ದ ಪಕ್ಷವ ಸೇರು
ಇದ್ದ ಮೂವರಲಿ ಕದ್ದವರಾರು
ಬೆಣ್ಣೆ ಮುದ್ದೆ ಮೆದ್ದವರಾರು
ಯಾರಿಗೂ ಬಿಡದೆ ಒಂದು ಚೂರು
ಅವರು ಇವರು ಎವರು
*****