ಭಜನಿ ಕೇಳಿದಿಯೇನ ನನಸಜನಿ
ರಜನಿ ಹೂಳಿದಿಯೇನ ||ಪಲ್ಲ||
ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ
ಜಡಿತುಂಬ ಕ್ಯಾದಿಗಿ ಹೆಣೆದಾನ
ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ
ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧||
ಎಂಥ ಚಂದನ ಭಜನಿ ಸಂಗಮ ಶಿವಭಜನಿ
ಬಾಲ್ಯಾರ ಬಡಿವಾರ ನೋಡ್ಯಾನ
ಪಟ್ಟದ ಗುರುವಲ್ಲ ಮಠದಂಗ್ಡಿ ಸ್ವಾಮೆಲ್ಲ
ಚಲುವೇರ ಎದಿತುಂಬ ಮಲಗ್ಯಾನ ||೨||
ಯೋಗಾಗ್ನಿ ಕೈತುಂಬ ಜ್ಞಾನಾಗ್ನಿ ಕಣ್ತುಂಬ
ಗುಳಬುಟ್ಟಿ ತಿಪ್ಪೀಯ ಸುಟ್ಟಾನ
ದಕ್ಷಿಣಿ ಗುರುವಲ್ಲ ಯಕ್ಷಿಣಿ ಸ್ವಾಮೆಲ್ಲ
ಮಂಗ್ಯಾಗ ಚಳ್ಹಣ್ಣು ತಿನಿಸ್ಯಾನ ||೩||
ಜನುಮವಿಲ್ಲದ ಸೋಮ ಹನುಮನಿಲ್ಲದ ರಾಮ
ಹುಡಿಗೇರ ತುಡುಗೇರ ಮಾಡ್ಯಾನ
ಪಲ್ಲಕ್ಕಿ ಗುರುವಲ್ಲ ಚೌರಿಚಾಮರವೊಲ್ಲ
ಪರಹೆಂಡ್ರ ಮಠದಾಗ ಕದ್ದಾನ ||೪||
*****
ಭಜನಿ = ಭಗವಂತನ ವಾಣಿ
ಸಜನಿ = ಪ್ರಿಯತಮೆ, ಆತ್ಮ
ಗುರುರಾಯ = ಪ್ರಿಯತಮ, ಪರಮಾತ್ಮ