ಆ ಕಣ್ಣು
ನೀರು ನೆಲ ಆಕಾಶ
ತನ್ನಲ್ಲೆ ಅಂದಿತು
ಆ ಕಣ್ಣು
ಮೋಹ ಮದ ಮತ್ಸರ
ತನ್ನಲ್ಲೆ ಅಂದಿತು
ಆ ಕಣ್ಣು
ಕ್ರಿಮಿ ಕೀಟ ಪಶು ಪಕ್ಷಿಗೆ
ಕನ್ನಡಿ ತಾನೆಂದಿತು
ಆ ಕಣ್ಣು
ಹುಟ್ಟು-ಸಾವು
ತನ್ನಲ್ಲೆ ಎಂದಿತು
ಆ ಕಣ್ಣು
ಜಗತ್ತು ತಾನೆಂದಿತು
೨
ಧಗ ಧಗ ಧಗ ಧಗ
ಉರಿಯುವ ಬೆಂಕಿಯಲ್ಲಿ
ಹೂವಿನ ಎಸಳುಗಳಂತಹ
ಕಣ್ಣುಗಳು….
ಜಗತ್ತು ಇಷ್ಟು ಸುಲಭವಾಗಿ
ಬೂದಿಯಾಗುವುದು
ಎಂದು ಯಾರು ಎಣಿಸಿದ್ದರು?
ಆದೂ ಕಣ್ಣೆದುರು…
*****