ಭಕ್ತನು ನಾನೇ?
ನಿನ್ನಂತರಗವ ಅರಿಯದ|
ಭಕ್ತನೆಂಬ ಪಟ್ಟ ಬಿರುದುಗಳ
ಬಾಚಿಕೊಳ್ಳುವ ಆತುರ,
ಬರದಲ್ಲಿರುವ ಆಡಂಬರದಾ
ಭಕ್ತನು ನಾನೇ||
ಮೈಮೇಲೆ ರೇಷಮಿ ವಸ್ತ್ರಾ
ಕೈತುಂಬಾ ವಜ್ರಾದಾಭರಣ|
ಕತ್ತಲಿ ಹೊಳೆಯುವ ಮುತ್ತು ರತ್ನ
ಕನಕಾದಿಗಳ ಸರಮಾಲೆ|
ಬೆಳ್ಳಿಯ ಜನಿವಾರ
ತೋರಿಕೆಯ ನಾಮಾದಿ ಲಾಂಛನ
ಕೊರಲೋಳು ಕಂಠಪಟನಾ ಮಾಡುವ||
ಪೂಜೆಗೆ ಬಂಗಾರದ ವಿಗ್ರಹಗಳು
ಬೆಳ್ಳಿಯ ದೀಪಾದಿ ಸಲಕರಣೆಗಳು
ಸೇವೆಗೆ ಆಳುಕಾಳುಗಳು|
ಅಲಂಕಾರಕೆ ಬಗೆಬಗೆಯ ಪರಿಕರಗಳಿಂದ
ಪೂಜಿಸಿ ಒಲಿಸಲೆತ್ನಿಸುವ||
ಅವನಂತರಂಗವ ನರಿತು
ಶುದ್ಧ ಶ್ರದ್ಧಾಭಕ್ತಿಯಲಿ ಒಂದೆಲೆ ತುಳಸಿ
ಒಂದೇ ಒಂದು ಗರಿಕೆ, ತ್ರಿದಳ ಬಿಲ್ವಪತ್ರೆ,
ಒಂದಿಡಿ ಅವಲಕ್ಕಿಯ
ತನು ಮನದಲೊಂದಾಗಿ ಅರ್ಪಿಸೆ
ಸಂತೋಷದಲಿ ಕರಗಿ ಒಲಿವ
ಅನಂತ ಮೂರ್ತಿಯ ಅರಿಯದ ನಾನು||
*****