ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾಯಿಲೆಯನ್ನು ಕಂಡು ಹಿಡಿಯಬಲ್ಲ ಕಂಪ್ಯೂಟರ್ ಚಿಪ್‌ಗಳು ಬರಲಿವೆ. ವ್ಯಕ್ತಿಯ ಅಂಗಾಂಗದ ಒಂದು ಕೋಶ ಒಳಗೆ ಇರುವ ಜೀನ್ ಅನ್ನು ಪರೀಕ್ಷಿಸಿ ಮುಂದೆ ಕ್ಯಾನ್ಸರ್ ಬರಲಿದೆಯೇ, ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆಗಳಿವೆಯೇ? ಎಂದು ಈ ಚಿಪ್‌ನಿಂದ ನಿಖರವಾಗಿ ಹೇಳಬಹುದು.
ನಿರ್ದಿಷ್ಟ ಅನುಕ್ರಮದ D.N.A.ಎಳೆಯನ್ನು ಕಂಪ್ಯೂಟರ್ ಭಾಷೆಯಲ್ಲಿ ಈ ಚಿಪ್‌ನಲ್ಲಿ ಬರೆದಿಡಲಾಗುತ್ತದೆ. ದೇಹದ ಕೋಶ ಒಂದರಲ್ಲಿ ಇರುವ ಡಿ.ಎನ್.ಎ ಎಳೆಯನ್ನು ಅದರೊಂದಿಗೆ ಹೋಲಿಸಿ ನೋಡಿ, ಯಾವ ಜೀನ್ ನ್ಯೂನ್ಯತೆಯಿಂದ ಕೂಡಿದೆ, ಎಂದು ಕ್ಷಣಾರ್ಧದೊಳಗೆ ಕಂಡು ಹಿಡಿದು ಈ ಚಿಪ್‌ನ ಸಹಾಯದಿಂದ ಯಾವ ಕಾಯಿಲೆ ಬರುತ್ತದೆಂದು ತಿಳಿಯಬಹುದು. ಒಂದು ವೇಳೆ ದೇಹದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದರೆ ಅದು ಯಾವ ಹಂತದಲ್ಲಿದೆ. ದೇಹದ ಯಾವೆಲ್ಲ ಭಾಗಕ್ಕೆ ಈಗಾಗಲೇ ಹರಡಿದೆ? ಎಂಬುವುದು ಕ್ಯಾನ್ಸರ್‌ಗೆ ತುತ್ತಾದ ಕೋಶಗಳು ಕಾಯಿಲೆಗಳು ಗಂಭೀರತೆಗನುಗುಣವಾಗಿ ಬೆಳಕನ್ನು ಹೊರ ಸೂಸುವ
ಮೂಲಕ ತಿಳಿಸುತ್ತವೆ.
ಎಷ್ಟೊ ಸಲ ಕೆಲವೊಂದು ಕಾಯಿಲೆಗಳು ವೈದ್ಯರು ಪರೀಕ್ಷಿಸಿ ನೋಡಿ ಮದ್ದುಕೊಟ್ಟರೂ ಗುಣವಾಗದಿರುವುದು ಉಂಟು. ವೈದ್ಯರ ಪ್ರಕಾರ ಇದು ಸಾಮಾನ್ಯ ಕಾಯಿಲೆ ಆಗಿರಬಹುದು. ಆದರೆ ಅದು ಗುಣವಾಗದಿರುವುಕ್ಕೂ ದೇಹದ ಜೀನ್‌ಗಳಿಗೂ ಪರಸ್ಪರ ಸಂಬಂಧ ಇರುತ್ತದೆ. ಯಾವ ಜೀನ್ ನ್ಯೂನ್ಯತೆಗೊಳಗಾಗಿದೆ ಎಂದು ನಿಖರವಾಗಿ ಪತ್ತೆಹಚ್ಚಿ ಅದಕ್ಕನುಗುಣವಾಗಿ ಸೂಕ್ತ ಚಿಕಿತ್ಸೆ ಕೊಟ್ಟಾಗಲಷ್ಟೇ ಆ ವ್ಯಕ್ತಿ ಗುಣಮುಖವಾಗಲು ಸಾಧ್ಯ ಎಂದು ಕಂಡು ಹಿಡಿಯಲಾಗಿದೆ.
*****