ನನ್ನ ಮನದಂಗಳದಿ ಬಂದು
ನಿಲ್ಲುವನಾ ರಾಯ
ಜರಿನೂಲ ಜೋಪಡಿಯ ಕಟ್ಟಬಹುದು.
ಬೆಳ್ಳಿನಿದ್ದೆಗೆ ಕೂಡಿ
ಸ್ವಪ್ನ ಜತನದಿ ಹೂಡಿ
ನಿತ್ಯ ಮಲ್ಲಿಗೆ ಮಾಲೆ ಮೂಡಿಸಬಹುದು.
ಸ್ವಾಭಿಮಾನದ ಗೋಡೆ
ಸುಮ್ಮನೆ ಹುಟ್ಟುವುದು
ಸಹನೆ ಸಾಧನ ಬಾಳ್ಗೆ ಸತ್ಯವಹುದು.
ಹುಲ್ಲುಗಾವಲ ಒಳಗೆ
ಹುಳ ಹುಪ್ಪಡಿಯ ಕೋಟೆ
ಹಂಬಲಿಸಿ ಹಾಕದಿರು ಮರಳಗೋಡೆ
ಬಾಳು ಬದುಕಿದು ಸುಳ್ಳೆ
ನೀರ ಮೇಲಿನ ಗುಳ್ಳೆ
ಭವಸಾಗರದಿ ಬವಣೆ ಭಾರವಿರದೆ!
ಇದ್ದರೂ ಇರಲೇಳು
ಈಸಬೇಕು ಇದ್ದು ಜೈಸಬೇಕು
ಜವರಾಯ ಬಂದೊಡನೆ ಜೈಎನ್ನಬೇಕು.
*****