ರಿವಾಯತ ಹೊತಗಿ ಹೋಯಿತೋ            |ಪ|

ಕ್ಷತಿಪತಿ ಶಾರಮದೀನದ ಮೋರುಮ
ಆರು ಶಾಸ್ತ್ರ ಹದಿನೆಂಟು ಪುರಾಣದ ಹೊತಗಿ    |೧|

ಮಾಯದ ಮೋರುಮ ನ್ಯಾಯದ ಸಮರವು
ನಾಯಿಯ ಜಲ್ಮಕೆ ಬೀಳುವವನಿಗೆ              |೨|

ಸ್ವರಗಳನರಿಯಿದ ನರಗುರಿಗಳಿಗೆಲ್ಲ
ಧರಿಯೊಳು ಶಿಶುನಾಳಧೀಶಗ ಸಲ್ಲದ           |೩|
*****