ಬಾಲೆ ನೀಲಾಂಜನ ಬೆಳಗುಬಾ

ಬಾಲೆ ನೀಲಾಂಜನ ಬೆಳಗುಬಾ
ಲೀಲಾನಂದ ವಿಶಾಲ ದಯಾಳಗೆ || ಪ ||

ಮಿಂದು ಮಡಿಯನುಟ್ಟು ದಂದುಗವ ಬಿಟ್ಟು
ಒಂದೆ ಮನಸಿನಿಂದ ವಂದಿಸುತೆ
ಇಂದುವದನೆ ಜಯ ಎಂದು ಪೊಗಳುತಲಿ
ಸುಂದರ ಗುರುಗೋವಿಂದನ ಆಡಿಗೆ || ೧ ||

ಮೂರಾರುದಳದೊಳು ತೋರಿ ಅಡಗುವ ಜ್ಯೋತಿ
ಬೇರೊಂದು ತಳಿಗೆಯೊಳು ತುಂಬಿಕೊಂಡು
ನೀರಜನಯನೆ ಮಂತ್ರಾಕ್ಷರ ಜಪಿಸುತೆ
ಕಾರ‍ಣಮೂರುತಿಗೆ || ೨ ||

ಪಿಡಿದು ಪಂಚಾರತಿ ನುಡಿದು ಶಿವನ ಸ್ತುತಿ
ಬಿಡದೆ ಗಂಧಾಕ್ಷತೆ ಧರಿಸುತೆ
ಕೊಡುತೆ ಅಂಗ ಮನ ಮುಡುಪಿಡುತಲಿ ಎನ್ನ-
ಒಡೆಯ ಶಿಶುನಾಳೇಶನ ಪಾದಕೆ || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಕಜನೇತ್ರೇ ಬಾ ಅಂಕಿತಸ್ಥಾನಕೆ
Next post ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…