ಶ್ರೀ ಗುರುವರನ ಕರುಣವ ಪಡೆಯುತ
ಬೇಗದಿರಾಗರಚನೆಯಿಂದ ಕೊಂಡಾಡಿ
ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ ||
ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು
ಸಂಸಾರಶರಧಿಯ ನೀ ದಾಂಟು || ಆ, ಪ. ||
ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ
ಕೇಡೊದಗುವದು ವಿಕಾರಿಗೆ
ನಾಡೆಲ್ಲ ಕೈಗೂಡಿ ನರರಿಗೆ ಪ್ರಳಯವು
ಕಾಡು ಸೇರಿದರೂ ಬಿಡದಣ್ಣಾ || ೧ ||
ಉತ್ತರದಿಕ್ಕಿನೊಳ್ಹುಟ್ಟುವದದು ರೋಗ
ಅಷ್ಟದಿಕ್ಕನೆ ಸುತ್ತಿಕೊಳ್ಳುವದು
ಅತ್ಯಧಿಕ ಇಂಗ್ಲೀಷ ಸರಕಾರ ದೊರೆಗಳಾ
ಗೊತ್ತುಮಾಡುವರು ಪ್ಲೇಗುಯೆಂತೆಂದು ||೨||
ರೋಗದ ಸೂಚನೆ ಮೊದಲು ಇಲಿಗೆ ತಗಲಿ
ಮ್ಯಾಗಿಂದ ಮನೆಯೊಳು ಬಿದ್ದಿಳಿಯೆ
ಆಗ ಜನರಿಗಂಟಿ ಗಾಭರಿಗೊಳ್ಳುತ
ಹ್ಯಾಗೆಮಾಡಲಿ ದೇವಾಯೆನ್ನವರು ||೩||
ಜಗಪತಿ ಪ್ರಜಕೆಲ್ಲಕಪ್ಪಣೆ ಇತ್ತನು
ತಗಲಬಾರದು ರೋಗ ಒಬ್ಬರಿಗೆ
ಅಗಲಿಸಿ ಊರಬಿಡಿಸಿ ಹೊರಗ್ಹಾಕಿಸಿ
ಮಿಗಿಲಾದ ಕ್ವಾರಂಟು ಕಟ್ಟಿಸುವಾ ||೪||
ಹೊಲಮನಿ ದ್ರವ್ಯದ ಬಲು ಚಿಂತಿಯಿ೦ ಬಿಟ್ಟು
ಹಲಬುತಡವಿಯೊಳು ಗುಡಿಸಲದಿ
ಇಳೆ ಜನರಿರುತಿತೆ ಕಳತಸ್ಕರರು
ಕಲ್ಲು ಕವಣಿಯೊಳಿಟ್ಟಿಟ್ಟು ಹೊಡೆಯುವರು ||೫||
ಒಬ್ಬರೊಬ್ಬರ ಬದಕಂ ಒಬ್ಬರೊಬ್ಬರಿಗಾಗಿ
ಒಬ್ಬರೊಬ್ಬರ ಮುಟ್ಟದಾಗುವದು
ಸರ್ವದೇಶದೊಳು ಪರಿ ಪರಿ ಕಷ್ಟ-.
ಗಳ್ಹಬ್ಬುತಿಹವು ದಿಟ ತಿಳಿ ಮನವೆ ||೬||
ಯಾಕೆ ಈ ಪರಿ ಕಷ್ಟ ನರರಿಗಾವುವದನೆ
ಕಾಕುಜನದಪಾಪ ಹೆಚ್ಚುತಿರೆ
ಲೋಕನಾಥನು ಭೂಮಿಗ್ಯಾಕೆ ಭಾರವು ಎಂದು
ತಾ ಕಳುಹಿದ ಮೃತ್ಯುದೇವತೆಯ ||೭||
ಗುರುಹಿರಿಯರನೆಲ್ಲ ಜರಿಯುತ ಜ್ಞಾನದಿ
ಪರದ್ರವ್ಯ ಪರಸ್ತ್ರೀಯ ಕದ್ದೊಯುತಾ
ಸರಿ ನಮಗಾರೆಂದು ದುರುಳರು ಗವ೯ದಿ
ಮೆರದಾಡುತಿರುವರು ಲೋಕದಲಿ ||೮||
ಹೇಳಲು ಬಹಳುಂಟು ಸೂಕ್ಷ್ಮದಿ ತಿಳಿಸುವೆ
ತಾಳೆಳು ಭೂಕಾಂತೆ ಬಹುಭಾರವಾ
ತಾಳಿದ ಶೇಷನು ಸೀರಖಾನಿ ನಿಂತನು
ಹಾಳುದೇಗುಲ ಹೊಕ್ಕ ಶಿವ ತಾನು ||೯||
ಈ ತೆರ ದುಜ೯ನ ಪ್ರಾಂತದಿಂದಲಿ ಬಹು-
ಪಾತಕ ಹೆಚ್ಚಿತು ಕಲಿಯೊಳಗೆ
ತಾತಗುರುಗೋವಿಂದನನು ಮೊರೆಹೊಕ್ಕರೆ
ಆತನೆ ರಕ್ಷಿಪ ಕರುಣದಲಿ || ೧೦ ||
*****