ಎರಡು ದೃಶ್ಯಗಳು

ಉರಿಬಿಸಿಲಲ್ಲಿ ಗಾಣದ ಸುತ್ತ
ಜೀಕುತ್ತಿದೆ ಮುದಿ ಎತ್ತು;
ಬತ್ತಿದ ಕಣ್ಣು ಕತ್ತಿನ ಹುಣ್ಣು
ನೊಣ ಮುಸುರುತ್ತಿವೆ ಸುತ್ತೂ:
ಬಳಲಿದೆ ಕಾಲು ಎಳೆದಿವೆ ಭಾರ
ಬೆನ್ನಿಗೆ ಬೆತ್ತದ ಪಾಠ,
ಎದುರಿಗೆ ಮಠದಲಿ ಬಸವ ರಥೋತ್ಸವ
ಸಿಹಿಸಿಹಿ ಭಕ್ಷ್ಯದ ಊಟ!

* * *

ಬಸ್ಸು, ಲಾರಿ, ಸ್ಕೂಟರ್, ಕಾರು
ಬರುತಿವೆ ಬಲು ಜೋರಿಂದ;
ಸ್ಕೂಟರ್ ಮೇಲೆ ಮದಿಸಿದ ಯುವಕ
ಹಿಂದಿದೆ ಐದರ ಕಂದ.
ಎರಡು ಕೈಯಲೂ ಸ್ಕೂಟರ್ ಹಿಡಿದೇ
ನಿದ್ದೆ ಮಾಡುತಿದೆ ದೇವರೇ!
ಕೂಗುವಂತಿಲ್ಲ, ಬಿಡುವಂತಿಲ್ಲ
ಓಡಿದೆ ಸ್ಕೂಟರ್ ಹಾಗೇ.
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೪೮
Next post ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…