ರಾತ್ರಿ ಬೇಗ ಮಲಗಿ

ರಾತ್ರಿ ಬೇಗ ಮಲಗಿ

Chandra

ಮಕ್ಕಳು :  ರಾತ್ರಿ ಬೇಗ ಮಲಗಿ ಬೆಳಗ್ಗೆ
ಆರಕ್ಕೇಳ್ತೀವಿ
ಸಖತ್ತು ತಿಂಡಿ ಬಾರಿಸಿ ತಪ್ಪದೆ
ಪಾಠ ಓದ್ತೀವಿ.

ಗುಂಡ :    ತಿಂಡಿ ತಿಂಡಿ ತಿಂಡಿ
ತಿನ್ತೀನೊಂದು ಬಂಡಿ!

ಮಕ್ಕಳು :  ಹಟವೇ ಮಾಡದೆ ನಗ್ತಾ ದಿನಾ
ಸ್ಕೂಲಿಗೆ ಹೋಗ್ತೀವಿ,
ಎಲ್ಲರ ಜೊತೇಲು ಕೂತು ಹೇಳಿದ
ಪಾಠ ಕಲಿತೀವಿ.

ಗುಂಡ :    ಪಾಠ ಪಾಠ ಪಾಠ
ಪಾಠ ಮುಗೀತೊ  ಆಟ!

ಮಕ್ಕಳು :  ಸಂಜೆ ಆಯ್ತೋ ಆಟಕ್ಕೇಂತ
ಎಲ್ಲಾ ಓಡ್ತೀವಿ
ಕುಂಟಾಪಿಲ್ಲೆ ಚೆಂಡು ರಿಂಗು
ಎಲ್ಲಾ ಆಡ್ತೀವಿ.

ಗುಂಡ :    ಚೆಂಡು ಚೆಂಡು ಚೆಂಡು
ಉಂಡೆ ಥರ ಗುಂಡು

ಮಕ್ಕಳು :  ಆಟ ಮುಗಿಸಿ ಮನೆಗೆ ಬಂದು
ಪ್ರಾರ್ಥನೆ ಮಾಡ್ತೀವಿ
ಪಾಠ ಓದಿ ಊಟ ಮಾಡಿ
ಗೊರಕೆ ಹಾಕ್ತೀವಿ!

ಗುಂಡ :    ಢರ್ ಢರ್ ಢರ್
ಗೊರ್ ಗೊರ್ ಗೊರ್
ಢರ್ ಢರ್ ಢರ್
ಗೊರ್ ಗೊರ್ ಗೊರ್!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನ್ನದ್ ತಪ್ಲೆ
Next post ಆತ್ಮ ಸೌಂದರ್ಯ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…