೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. “ನ್ಯಾನೋ ಡಾಕ್ಸ್” ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದರ್ಶಕಗಳನ್ನು ಅಳವಡಿಸಲಾಗಿದೆ. ಶರೀರಕ್ಕೆ ಹಾನಿಯುಂಟು ಮಾಡುವ ಸೂಕ್ಷ್ಮಜೀವಿಗಳು, ವಿಕೃತಗೊಂಡ ರಕ್ತಕಣಗಳು ಮತ್ತು ಕ್ಯಾನ್ಸರ್ ಕಣಗಳನ್ನು ಪತ್ತೆಹಚ್ಚುವ ದೃಶ್ಯ ವ್ಯವಸ್ಥೆಯ ‘ಮೆಮೋರಿ’ಯನ್ನು ಅಳವಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಇವು ರಕ್ತವನ್ನು ಶುದ್ಧಿಗೊಳಿಸುತ್ತವೆ. ಈ ನ್ಯಾನೋ ಇಂಜಿನ್‌ಗಳು (ರೋಬಟ್ ವೈದ್ಯ) ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಗುರುತಿಸಿ ಅವುಗಳ ಹೊರಕವಚವನ್ನು ಭೇಧಿಸುವದರಿಂದ ಬಿಳಿ ರಕ್ತಕಣಗಳಿಗೆ ಆ ಸೂಕ್ಷ್ಮ ಜೀವಿಗಳನ್ನು ನಾಶಪಡಿಸಲು ಅನುಕೂಲವಾಗುತ್ತದೆ. ಹಲವಾರು ವರ್ಷಗಳಿಂದ ಶರೀರದಲ್ಲಿ ನೆಲೆಗೊಂಡ ಸೂಕ್ಷ್ಮಜೀವಿಗಳನ್ನು ಈ ರೋಬಟ್ ಇಂಜಿನ್‌ಗಳು ಪತ್ತೆಹಚ್ಚುತ್ತವೆ. ಬೋಸ್ಟನ ಕಾಲೇಜಿಗೆ ಸೇರಿದ ಟಿ. ರಾಸ್‌ಕೆಲ್ಲಿ ಮತ್ತು ತಂಡವು ಕೇವಲ ೭೮ ಪರಮಾಣುಗಳ ಒಂದು ನ್ಯಾನೋ ಇಂಜಿನನ್ನು ರೂಪಿಸಿದ್ದಾರೆ. ಜೀವಕೋಶಗಳಂತೆ ಅದು ಕೂಡ (ATP) ಅಣುವಿನಿಂದ ಶಕ್ತಿ ಪಡೆದು ಗ್ರಹಿಸುವುದು ವಿಶೇಷವಾದ ಸಂಗತಿ.
ಇಂತಹ ರೋಬಟ್ ಸರ್ಜನ್‌ಗಳು ಆಸ್ಪತ್ರೆಗಳು ಕಾಲಿಡುವ ದಿನ ಹತ್ತಿರದಲ್ಲಿದೆ.
*****