ಬೆನ್ನಿನ್ ಮೇಗಿನ್ ಸರಟ್ ಓದ್ರೋಯ್ತು ಬೆನ್ ಮ್ಯಾಗ್ ಐತೆ ಚಮ್ಡ! ಯೆಂಡ ತತ್ತ! ಚಮ್ಡ ಓದ್ಮೇಲ್ ಉಟ್ತೈತಾ ಒಂದ್ ದಮ್ಡಿ? ೧ ಬಡವೊರ್ ಬದಕೋ ದಾರೀಂತಂದ್ರೆ- ಈ ಮಾತ್ನಾಗ್ ಐತ್ ಮರ್‍ಮ! ಕುಡಕನ್ ಮಾತ್ ಅಂದ್ರ್ ಎಂತಾದ್ದಣ್ಣ- ಕಾಣದ ಕಣ್ಣೀರ್ ಸುರ್‍ಮ! ೨ ...

ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ- ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ- ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ- ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ- ತಾಪವನ್ನು ನುಂಗಿ ನಗೆಗೂಡಿ, ಬಡತನ ನೀಗಿ, ತಾಯಿ ನೆಲವನೆ ಸುತ್ತಿಯೊಳಗೊಂ...

ನಾನು ಸತ್ತಿರುವೆನೆಂದು ಜನರು ಅನ್ನುತ್ತಾರೆ. ದುಃಖ ಪಡುತ್ತಾರೆ. ಕೆಲವರು ದುಃಖಬಡುವವರಿಗೆ ಸಮಾಧಾನದ ಮಾತು ಹೇಳುತ್ತಾರೆ. ಹೀಗಿದ್ದರೂ ನಾನು ಸತ್ತಿಲ್ಲ. ಜೀವದಿಂದಿರುವೆನೆಂದು ನನಗೆ ಅನಿಸುವದು. ಬಹು ಜನರ ಮತವು ನಾನು ನಿಜವಾಗಿ ಮೃತಪಟ್ಟನೆಂದು. ಆದ...

ಅನ್ನದಾನಗಳಿಂದ ಮುನ್ನದಾನಗಳಿಲ್ಲ ಉನ್ನತದೀ ಮಾತಿಗಿಂದಾವ ತೂಕವು ಇಲ್ಲ ದಾನದನ್ನವದಾರಿಗೆ ಬೇಕು? ದಾರಿ ದಾರಿಗು ಅನ್ನ ಸತ್ರಕುನ್ನತದ ಹೆಸರಾಗಿ ಮಿನುಗುತಿದೆ ಘನತೆಯೊಳೆಸೆವ ಕಾಸಿಗನ್ನವೆಲ್ಲೆಡೆಗುದುರುತಿದೆ – ವಿಜ್ಞಾನೇಶ್ವರಾ *****...

ತೋಟಾ ತೋಟಾ ತಿರಗಿ ನಾನು ಮೂರ ದುಂಡ ಮಲಿಗೀ ಹೂವ ತಂದೇ ||೧|| ದುಂಡ ಮಲಗೀ ಹೂವ ಮುಡಿಯೇ ಜಾಣೇ ದುಂಡರಿ ಪಾರಾಗಿ ಹೋದ (ಮತ್ತೆ ತರಲು ಹೋದ) ||೨|| ಈಟೀ ತಿರ್‌ಗಿ ತಿರುಗಿ ನಾನು ಮೂರ ಈಟಿಯ ದಾರೂವ ತಂದೇ ||೩|| ಈಟಿಯ ದಾರ್‌ದೂವ ಮುಡಿಯೇ ಜಾಣೇ ಈಟರಿ ಪ...

ಎರಡು ದಿನಗಳ ಹಿಂದೆ ಜೀನ್ ವಾನನಿಗೆ ಯಾರೋ ಒಂದು ಕಾಗದವನ್ನು ತಂದುಕೊಟ್ಟಿದ್ದರು. ಅದನ್ನು ತಂದವರ ಹೆಸರು ಅವನಿಗೆ ತಿಳಿಯದು. ಅದರಲ್ಲಿ ‘ ಈ ಸ್ಥಳವನ್ನು ಬಿಟ್ಟು ಹೊರಡು,’ ಎಂದು ಮಾತ್ರ ಬರೆದಿತ್ತು. ಇದನ್ನು ಉದಾಸೀನ ಮಾಡಲು ಧೈರ್ಯವಿ...

ಬದುಕಿನ ಯಾವುದೇ ಕ್ಷಣಗಳಿರಲಿ ಮನವುನೊಂದು ಘಾಸಿಗೊಂಡಿರಲಿ ಆದರೆ ಮನವನ್ನು ಓಲೈಸಲು ನಿ ಕೆಟ್ಟದಕ್ಕಾಗಿ ಪದರು ಹಾಸದಿರಲಿ ಮನದಲಿ ನಿರ್‍ಧಾರವೇ ಅಚಲವಾಗಿರಲಿ ಏಕೆಂದರೆ ಮನವು ನಿನ್ನದಲ್ಲವೇ ನೀ ನಾಡಿದ ಮಾತು ಪಾಲಿಸಬೇಕೆಂದು ಮನಕ್ಕೆ ಆಜ್ಞೆಯ ನೀಡುವುದಿ...

ಆಧುನಿಕ ಕಾಲದಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳು ಜನ ಮೆಚ್ಚಿಕೊಂಡಂತೆ ಅದರಲ್ಲಿ ವಚನ ಸಾಹಿತ್ಯವು ಅಷ್ಟೇ ಪ್ರಭಾವಿಯಾಗಿ, ಮುಕ್ತವಾಗಿ ಜನರ ಮನಸ್ಸಿನ ಮೇಲೆ ಬೀರಿದೆ ಎಂದರೆ ಅತಿಶಯೋಕಿತಯೇನಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಗಣಕಯಂತ್ರಗಳು, ಅಂತರಜಾಲ...

ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ ವರ ಯೋಗಿಯ ನಿಶ್...

1...7475767778...110

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...