ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ-
ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ-
ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ-
ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ-
ತಾಪವನ್ನು ನುಂಗಿ ನಗೆಗೂಡಿ, ಬಡತನ ನೀಗಿ,
ತಾಯಿ ನೆಲವನೆ ಸುತ್ತಿಯೊಳಗೊಂಡು ಬಲಗೊಂಡು,
ದಿನದಿನಕೆ ಎದೆಯ ಸುಧೆಯಿಂದ ತೀವಿದ ಮೈಯು
ತಂಬಗೊಳ್ಳುತ್ತಿರಲು, ಕ್ಷಯವು ನುಂಗಿತೆ ಅದನು !
ಬಾನಬಯಲಿನ ತುಂಬ ಮೋಡಗಳೆ ಮೂಡಿದರು,
ಕಾಣಕಾಣುತ ವಸ್ತು ಕನಸು ಗೂಡಿದರು, ಚರಿ-
ತೆ ಕತೆಯಾದರು, ಮಿಂಚಿದುಸಿರು ಸ್ಮೃತಿಪಥಲೀನ-
ವಾದರೂ-ನಶ್ವರವೆ ? ಎಲೆಗೆ ಪ್ರಾಣಜ್ಯೋತಿ !
ಹುಳಹೊಕ್ಕ ಹೂವನೊಳಹೊಕ್ಕು ಅರಿತವರಂಟೆ ?
ಮಗಮಗಿಸಿ ಹೋದ ನಗೆ ಹೂವ ಮರೆತವರಂಟೆ?
*****